Thursday, April 10, 2025
ಸುದ್ದಿ

ಅಕ್ರಮ ಜಾನುವಾರು ಸಾಗಾಟ ಆರೋಪ:ಸಂಘ ಪರಿವಾರದಿಂದ ಧರಣಿ- ಕಹಳೆ ನ್ಯೂಸ್

ಮಂಗಳೂರು, ಸೆ. 4: ನಗರದ ಕಸಾಯಿಖಾನೆಗೆ ಅಕ್ರಮ‌ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಸಂಘ ಪರಿವಾರದ ಕಾರ್ಯಕರ್ತರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಧರಣಿ ನಡೆಸಿದ ಘಟನೆ ರವಿವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದ ಮಣ್ಣಗುಡ್ಡೆ ಬಳಿ ರಸ್ತೆಯಲ್ಲಿ ಧರಣಿ ಕುಳಿತ ಸಂಘಪರಿವಾರದ ಕಾರ್ಯಕರ್ತರು “ನಗರದ ಕಸಾಯಿಖಾನೆಗೆ ನಿರಂತರವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ. ಈ ಬಗ್ಗೆ ಕ್ರಮಕ್ಕೆ ಮನವಿ ಮಾಡಿದ್ದರೂ ಪೊಲೀಸರು ಕ್ರಮ‌ಕೈಗೊಂಡಿಲ್ಲ.‌ ಇಂದು ಮುಂಜಾನೆಯೂ ವಾಹನವೊಂದರಲ್ಲಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸಲಾಗಿದೆ” ಎಂದು ಆರೋಪಿಸಿದರು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ