Recent Posts

Monday, January 20, 2025
ಸುದ್ದಿ

ಹತ್ರಾಸ್ ಪ್ರಕರಣ : ಹಿಂಸಾಚಾರಕ್ಕೆ ಸಂಚು ರೂಪಿಸಿದ್ದ ನಾಲ್ವರು PFI ಕಾರ್ಯಕರ್ತರ ಸೆರೆ-ಕಹಳೆ ನ್ಯೂಸ್

 ದೇಶಾದ್ಯಂತ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿರುವ ಉತ್ತರ ಪ್ರದೇಶದ ಹತ್ರಾಸ್ ಗ್ಯಾಂಗ್‍ರೇಪ್ ಮತ್ತು ಕೊಲೆ ಪ್ರಕರಣದ ವಿಚಾರದಲ್ಲಿ ಶಾಂತಿ ಕದಡಿ ವ್ಯಾಪಕ ಹಿಂಸಾಚಾರಕ್ಕೆ ಸಂಚು ರೂಪಿಸಿದ್ದ ವ್ಯವಸ್ಥಿತ ಜಾಲವೊಂದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂದಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹತ್ರಾಸ್ ಸೇರಿದಂತೆ ಉತ್ತರಪ್ರದೇಶದ ವಿವಿಧೆಡೆ ನಡೆಯಬಹುದಾಗಿ ವ್ಯಾಪಕ ಕೋಮು ಗಲಭೆ ಮತ್ತು ಹಿಂಸಾಚಾರಗಳು ಇವರ ಬಂಧನದಿಂದ ತಪ್ಪಿದಂತಾಗಿದೆ.ದೇಶದ ವಿವಿಧೆಡೆ ಆತಂಕ ಸೃಷ್ಟಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‍ಐ) ನಾಲ್ವರು ಸದಸ್ಯರನ್ನು ಮಥುರಾದಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿಯಿಂದ ಹತ್ರಾಸ್‍ಗೆ ತೆರಳಿ ಅಲ್ಲಿ ಅಶಾಂತಿ ಸೃಷ್ಟಿಸಿ ಜಾತಿ ಗಲಭೆ ಮತ್ತು ಹಿಂಸಾಚಾರ ಸೃಷ್ಟಿಸಲು ತೆರಳುತ್ತಿದ್ದಾಗ ಈ ನಾಲ್ವರನ್ನು ಬಂಸಲಾಗಿದೆ. ಮುಜಾಫರ್ ನಗರದ ಅತಿಕ್-ಉರ್-ರೆಹಮಾನ್, ಮಲ್ಲಪ್ಪುರಂನ ಸಿದ್ಧಿಕಿ, ಬರೈಚ್‍ನ ಮಸೂದ್ ಅಹಮದ್ ಹಾಗೂ ರಾಮಪುರ್‍ನ ಅಲಾಂ ಎಂಬುವರನ್ನು ಬಂಸಲಾಗಿದೆ. ಇವರೆಲ್ಲರೂ ಪಿಎಫ್‍ಐನ ಸಕ್ರಿಯ ಕಾರ್ಯಕರ್ತರು. ಆರೋಪಿಗಳಿಂದ ಮೊಬೈಲ್ ಫೋನ್‍ಗಳು, ಲ್ಯಾಪ್‍ಟಾಪ್‍ಗಳು ಮತ್ತು ಉತ್ತರಪ್ರದೇಶದಲ್ಲಿ ಕೋಮುಗಲಭೇ ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಬಹುದಾಗಿದ್ದ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿಯಿಂದ ಕೆಲ ಅನುಮಾಸ್ಪದ ವ್ಯಕ್ತಿಗಳು ಹತ್ರಾಸ್‍ಗೆ ತೆರಳುತ್ತಿದ್ದಾರೆ ಎಂಬ ಖಚಿತ ವರ್ತಮಾನದ ಮೇರೆಗೆ ಮಥುರಾದ ಟೋಲ್ ಫ್ಲಾಜಾದಲ್ಲಿ ತಪಾಸಣೆ ವೇಳೆ ಇವರನ್ನು ಬಂಸಲಾಗಿದೆ ಎಂದು ಉನ್ನತ ಪೊಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ.

 ಕಾನೂನು-ಸುವ್ಯವಸ್ಥೆಗೆ ಧಕ್ಕೆಯುಂಟುಮಾಡಲು ಹುನ್ನಾರ:-
ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಿ ಶಾಂತಿ ಕದಡುವ ದುರುದ್ದೇಶದಿಂದ ಹತ್ರಾಸ್ ಘಟನೆಯನ್ನು ಮುಂದಿಟ್ಟುಕೊಂಡು ವ್ಯವಸ್ಥಿತ ಸಮೂಹವೊಂದು ಹುನ್ನಾರ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.ಜಸ್ಟೀಸ್ ಟು ಹತ್ರಾಸ್ ಎಂಬ ವೆಬ್‍ಸೈಟ್ ಮೂಲಕ ಕೆಲವು ದುಷ್ಕರ್ಮಿಗಳು ಹತ್ರಾಸ್ ಘಟನೆ ಬಗ್ಗೆ ಸುಳ್ಳು ವದಂತಿಗಳನ್ನು ಸೃಷ್ಟಿಸಿ ಜಾತಿ ಆಧಾರಿತ ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ಘಟನೆ ಬಗ್ಗೆ ಕಪೋಲಕಲ್ಪಿತ ಸುದ್ದಿಗಳನ್ನು ವೆಬ್‍ಸೈಟ್ ಮೂಲಕ ವಿಸ್ತರಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.