Recent Posts

Monday, January 20, 2025
ಸುದ್ದಿ

ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್-ಕಹಳೆ ನ್ಯೂಸ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಸುಶಾಂತ್ ಮರಣೋತ್ತರ ವರದಿಯ ಬಗ್ಗೆ ಈಗಾಗಲೇ ಪ್ರಶ್ನೆಗಳು ಕೇಳಿ ಬಂದಿದ್ದವು. ಈಗ ವಿಧಿವಿಜ್ಞಾನ ತಜ್ಞರ ವರದಿ ಬಂದಿದೆ. ಇದರಲ್ಲಿ ಸುಶಾಂತ್ ಸಾವಿನ ಸಮಯವನ್ನು ಉಲ್ಲೇಖಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿಯ ಪ್ರಕಾರ, ಮರಣೋತ್ತರ ಪರೀಕ್ಷೆಗೆ ಸುಮಾರು 10 ರಿಂದ 12 ಗಂಟೆಗಳ ಮೊದಲು ಸುಶಾಂತ್ ಸಿಂಗ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೂಪರ್ ಆಸ್ಪತ್ರೆಯ ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜೂನ್ 14 ರಂದು ರಾತ್ರಿ 11 ಗಂಟೆಗೆ ಸುಶಾಂತ್ ಮರಣೋತ್ತರ ಪರೀಕ್ಷೆ ನಡೆದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲ ಮರಣೋತ್ತರ ವರದಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಮಯವನ್ನು ಉಲ್ಲೇಖಿಸಿರಲಿಲ್ಲ. ಇದರ ಬಗ್ಗೆ ಪ್ರಶ್ನೆ ಎದ್ದಿತ್ತು. ಏಮ್ಸ್ ವಿಧಿವಿಜ್ಞಾನ ತಜ್ಞರ ತಂಡವು ಮುಂಬೈನ ವೈದ್ಯರನ್ನು ಪ್ರಶ್ನೆ ಮಾಡಿತ್ತು. ಸಿಬಿಐ ಈ ಸಂಗತಿಗಳನ್ನು ತನ್ನ ತನಿಖಾ ವರದಿಯ ಒಂದು ಭಾಗವನ್ನಾಗಿ ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್ ಮುಂದೆಯೂ ಇಡಲಾಗಿತ್ತು. ಏಮ್ಸ್ ವರದಿಯನ್ನೂ ಪ್ರಶ್ನೆ ಮಾಡಲಾಗ್ತಿದೆ. ಎರಡು ದಿನಗಳ ಹಿಂದೆ ಸುಶಾಂತ್ ಪ್ರಕರಣದ ತನಿಖೆ ನಡೆಸುತ್ತಿರುವ ತಂಡವು ಇದು ಕೊಲೆಯಲ್ಲ ಎಂದಿತ್ತು. ಏಮ್ಸ್ ಫೋರೆನ್ಸಿಕ್ ಮೆಡಿಕಲ್ ಬೋರ್ಡ್ ಅಧ್ಯಕ್ಷ ಡಾ. ಸುಧೀರ್ ಗುಪ್ತಾ ಹೇಳಿದ್ದರು. ಈ ವಿಷಯದ ಬಗ್ಗೆ ಡಾ. ಗುಪ್ತಾ ನಡೆಸಿದ ಸಂಭಾಷಣೆಯ ಆಡಿಯೊ ಒಂದನ್ನು ಟಿವಿ ಚಾನೆಲ್ ಬಿಡುಗಡೆ ಮಾಡಿದೆ. ಇದರಲ್ಲಿ, ಮುಂಬೈ ಪೊಲೀಸ್ ತನಿಖೆ ಮತ್ತು ಸಾಕ್ಷ್ಯಗಳನ್ನು ಹಾಳು ಮಾಡಿರುವ ಬಗ್ಗೆ ಮಾತಿದೆ. ಆಡಿಯೋದಲ್ಲಿ ಡಾ. ಸುಧೀರ್ ಗುಪ್ತಾ ಅವರು ಸುಶಾಂತ್ ಅವರ ಸಾವು ಆತ್ಮಹತ್ಯೆ ಅಲ್ಲ ಎಂದಿದ್ದಾರೆ. ಈ ಆಡಿಯೋ ಬಿಡುಗಡೆಯಾದ್ಮೇಲೆ ಅವ್ರ ಸಹೋದರಿ ಶ್ವೇತಾ ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.