Breaking News: ಕೆಪಿಸಿಸಿ ಅಧ್ಯಕ್ಷ ‘ಡಿ.ಕೆ ಶಿವಕುಮಾರ್’ಗೆ ಸಿಬಿಐಯಿಂದ ಸಮನ್ಸ್ ಜಾರಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ..!-ಕಹಳೆ ನ್ಯೂಸ್
ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಸೇರಿ ಅವ್ರಿಗೆ ಸೇರಿದ 14 ಸ್ಥಳಗಳ ಮೇಲೆ ಸಿಬಿಐ ರೇಡ್ ಮಾಡಿತ್ತು. ಸಧ್ಯ ಸಿಬಿಐ ಅವ್ರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, 2 ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಆದಾಯಕ್ಕೂ ಮೀರಿದ ಆಸ್ತಿ ಹೊಂದಿದ್ದು, ಮೇಲ್ನೋಟಕ್ಕೆ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಸಿಬಿಐ, ಸಮನ್ಸ್ ಜಾರಿ ಮಾಡಿದ್ದು, 2 ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಯವರಿಗೆ ಸೂಚನೆ ನೀಡಿದೆ.
ನಿನ್ನೆ ಬೆಳ್ಳಂಬೆಳಗ್ಗೆ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದಲ್ಲಿರುವ ಮತ್ತು ಕೋಡಿಹಳ್ಳಿಯಲ್ಲಿರುವ ಮನೆಗಳ ಮೇಲೆ ಸಿಬಿಐ ರೇಡ್ ಆಗಿದ್ದು, ಇಡಿ ವಿಚಾರಣೆ ಬಳಿಕ ಸಿಬಿಐ ಕಂಟಕ ಶುರುವಾಗಿದೆ. ಅಂದ್ಹಾಗೆ, ಬೆಂಗಳೂರು ಸಿಬಿಐ ಅಧಿಕಾರಗಳ ತಂಡದಿಂದ ಡಿ.ಕೆ.ಶಿವಕುಮಾರ್ ಮನೆ ಹಾಗೂ ಡಿ.ಕೆ. ಸುರೇಶ್ ಮನೆ ಮೇಲೆ ರೇಡ್ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಪರಿಶೀಲನೆ ಶುರುವಾಗಿದ್ದು, ಸಂಜೆ 4 ಗಂಟೆಯವರೆಗೆ ಅಂದ್ರೆ ಸತತ 10 ಗಂಟೆಗಳ ಸುದೀರ್ಘ ಪರೀಶಿಲನೆ ನಡೆಸಿತ್ತು. ಇನ್ನು ನಿನ್ನೆ ನಡೆದ ಈ ದಾಳಿಯಲ್ಲಿ ಸಿಬಿಐ ಅಧಿಕಾರಿಗಳು ಡಿಕೆಶಿ ಮನೆಯಿಂದ ಹಲವು ದಾಖಲೆಗಳು, ಚಿನ್ನಾಭರಣ ಸಹಿತ 50 ಲಕ್ಷ ರೂ. ನಗದು ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.