Sunday, January 19, 2025
ಸುದ್ದಿ

ಉತ್ತರಕಾಶಿಯ ರಾಮಚಂದ್ರ ಸ್ವಾಮೀಜಿ ; ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯರಿಂದ ಕಿಶೋರ್ ಕುಮಾರ್ ಪುತ್ತೂರಿಗೆ ಬೆಂಬಲ.!? – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ವಿಧಾನಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗ ಬಿಜೆಪಿ ಆಕ್ಷಾಂಕಿಗಳ ಪೈಕಿ ಕಿಶೋರ್ ಕುಮಾರ್ ಪುತ್ತೂರು ಪರ ಫೇಸ್ಪುಕ್ ಅಭಿಯಾನ ಒಂದೆಡೆ ನಡೆಯುತ್ತಿದ್ದರೆ. ಇನ್ನೊಂದೆಡೆ ಕಿಶೋರ್ ಕುಮಾರ್ ಬಗ್ಗೆ ಮಾಧ್ಯಮವೊಂದು ಪ್ರಕಟಿಸಿದ ವಿಡಿಯೋವನ್ನು ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಿಶೋರ್ ಒಳ್ಳೆಯ ಆಯ್ಕೆ….ಪುತ್ತಿಲ ಕೂಡ – ರಾಮಚಂದ್ರ ಸ್ವಾಮೀಜಿಯವರ ಕಮೆಂಟ್!

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಕಿಶೋರ್ ಪುತ್ತೂರು ಒಳ್ಳೆಯ ಆಯ್ಕೆ ಎಂದು ಉತ್ತರಕಾಶಿಯ ಕಪಿಲಾಶ್ರಮದ ರಾಮಚಂದ್ರ ಸ್ವಾಮೀಜಿಯವರು ಉಪಾಧ್ಯಾಯರ ಫೋಸ್ಟಿಗೆ ಕಮೆಂಟ್ ಮಾಡಿದ್ದಾರೆ. ತಮ್ಮೂಲಕ ಕಿಶೋರ್ ಕುಮಾರ್ ಗೆ ಬೆಂಬಲ ಸೂಚಿಸಿದ್ದಾರೆ.

ಶ್ರೀಕೃಷ್ಣ ಉಪಾಧ್ಯಾಯರು ಕಿಶೋರ್ ಕುಮಾರ್ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯ :

” ಪುತ್ತೂರು ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕುರಿತಾದ ಗುಸುಗುಸು ಸಂತೋಷ ಕೊಟ್ಟಿದೆ.ಗೊತ್ತಿಲ್ಲ ಏನೆಲ್ಲ ಆಗುತ್ತದೆ ಅಂತ.ಆದರೆ ಸ್ನೇಹಿತರಾದ ಕಿಶೋರ್ ಕುಮಾರ್ ಅವರ ಸರಳತೆಯನ್ನೂ ಅವರ ರಾಷ್ಟ್ರಪ್ರಜ್ಞೆಯನ್ನೂ ಬಹಳ ಇಷ್ಟಪಟ್ಟವರಲ್ಲಿ ನಾನೂ ಒಬ್ಬ.ನಮ್ಮ ಜೊತೆ ಬಂದು ಸ್ವಚ್ಛ ಭಾರತ್ ಅಭಿಯಾನದಲ್ಲಿ ಕಸವನ್ನು ಹೆಕ್ಕಿ ನಮ್ಮ ತಂಡದ ಬಹಳ ಆತ್ಮೀಯ ಸದಸ್ಯರೂ ಆಗಿರುವುದರಿಂದ ಕಿಶೋರಣ್ಣನ ಬಗೆಗೆ ವಿಶೇಷ ಮಮಕಾರ. “


ಕೊನೆಯ ಸಂದರ್ಭದಲ್ಲಿ ಏನಾಗುತ್ತೋ ಯಾರು ಊಹಿಸಲು ಅಸಾಧ್ಯ.

ಕಮಲ ಮುಡಿಯೋರು ಯಾರು ?

ಮಹಾಲಿಂಗೇಶ್ವರನೇ ಬಲ್ಲ !

ವರದಿ : ಕಹಳೆ ನ್ಯೂಸ್