Recent Posts

Saturday, November 16, 2024
ಸುದ್ದಿ

ವಿಶ್ವದ ಅತಿ ಉದ್ದದ ಅಟಲ್ ಸುರಂಗ ಉದ್ಘಾಟನೆಯಾದ ಬೆನ್ನಲ್ಲೇ 3 ಅಪಘಾತ: ಸೆಲ್ಫಿ ಸ್ಪಾಟ್ ಆಯ್ತು ಪ್ರವೇಶ – ನಿರ್ಗಮನ ದ್ವಾರ-ಕಹಳೆ ನ್ಯೂಸ್

ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಮಾಚಲ ಪ್ರದೇಶದ ರೋಹ್ಟಂಗ್ ಪಾಸ್ ನ ಅಟಲ್ ಸುರಂಗ ಮಾರ್ಗ ಉದ್ಘಾಟನೆಯಾ ಆದ 24 ಗಂಟೆಗಳಲ್ಲೇ ಮೂರು ಅಪಘಾತಗಳು ಸಂಭವಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಟಲ್ ಸುರಂಗದ ನಿರ್ಗಮನ ಮತ್ತು ಪ್ರವೇಶದ್ವಾರದ ಬಳಿ ವಾಹನ ಸವಾರರು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದ್ದು ಇದಾದ ನಂತರದಲ್ಲಿ ಸಂಚಾರ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.ಅಕ್ಟೋಬರ್ 3 ರಂದು ಶನಿವಾರ ಪ್ರಧಾನಿ ಮೋದಿ 9.02 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದಾರೆ. ಈ ಮಾರ್ಗದಲ್ಲಿ ಓವರ್ ಟೇಕ್ ನಿಷೇಧಿಸಿದ್ದು, 80 ಕಿಲೋಮೀಟರ್ ವೇಗದ ಮಿತಿ ನಿಗದಿಪಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು