ಹತ್ರಾಸ್ ರೇಪ್ ಕೇಸ್ಗೆ ಭಾರಿ ಟ್ವಿಸ್ಟ್: ಆರೋಪಿಯೊಂದಿಗೆ 104 ಬಾರಿ ಫೋನ್ಕಾಲ್ ಮಾಡಿದ್ದ ಯುವತಿ!-ಕಹಳೆ ನ್ಯೂಸ್
ಲಖನೌ: ಹತ್ರಾಸ್ ಅತ್ಯಾಚಾರ ಪ್ರಕರಣ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತೊಂದು ಮಹತ್ವದ ದಾಖಲೆ ದೊರೆತಿದ್ದು, ಇಡೀ ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.
ಪ್ರಕರಣದ ಮುಖ್ಯ ಆರೋಪಿ ಹಾಗೂ ಅತ್ಯಾಚಾರಕ್ಕೆ ಒಳಗಾಗಿರೋ ಯುವತಿಯ ಸಹೋದರನ ನಡುವೆ ಮೊದಲೇ ಸಂಪರ್ಕವಿತ್ತು ಎನ್ನಲಾಗ್ತಿದೆ. ಕಳೆದ ಐದು ತಿಂಗಳಲ್ಲಿ ಯುವತಿಯ ಸಹೋದರನ ಹೆಸರಿನಲ್ಲಿರೋ ಫೋನ್ನಿಂದ ಆರೋಪಿ ಸಂದೀಪ್ ಸಿಂಗ್ ಫೋನ್ಗೆ 62 ಔಟ್ಗೋಯಿಂಗ್ ಕಾಲ್ ಹೋಗಿದೆ. ಹಾಗೇ ಆರೋಪಿಯಿಂದ 42 ಇನ್ಕಮಿಂಗ್ ಕಾಲ್ ಸೇರಿ, ಒಟ್ಟು 104 ಕರೆಗಳ ದಾಖಲೆ ಪತ್ತೆಯಾಗಿದೆ ಅಂತ ವರದಿಯಾಗಿದೆ.
2019ರ ಅಕ್ಟೋಬರ್ 13ರಿಂದಲೇ ಇಬ್ಬರ ನಡುವೆ ಮಾತುಕತೆ ನಡೀತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಸಂತ್ರಸ್ತೆಯ ಸಹೋದರನನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎನ್ನಲಾಗಿದೆ.