Recent Posts

Sunday, January 19, 2025
ಸುದ್ದಿ

2021 ರಲ್ಲಿ ಜಿಡಿಪಿ ಶೇಕಡಾ 9.5 ರಷ್ಟು ಕುಸಿಯುವ ಸಾಧ್ಯತೆಯಿದೆ : ಆರ್‌ಬಿಐ ಭವಿಷ್ಯ-ಕಹಳೆ ನ್ಯೂಸ್

ಭಾರತದ ಜಿಡಿಪಿಯು 2020-21ನೇ ಹಣಕಾಸು ವರ್ಷದಲ್ಲಿ ಶೇ.9.6ರಷ್ಟು ಸಂಕುಚಿತಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವಬ್ಯಾಂಕ್ ಗುರುವಾರ ತಿಳಿಸಿದೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತವು ಶೇ.23.9ರಷ್ಟು ಋಣಾತ್ಮಕ ಪ್ರಗತಿ ದರವನ್ನು ದಾಖಲಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಣಕಾಸು ವರ್ಷದಲ್ಲಿ ದಕ್ಷಿಣ ಏಶ್ಯಾ ಶೇ.7.7ರ ಋಣಾತ್ಮಕ ಪ್ರಗತಿ ದರವನ್ನು ದಾಖಲಿಸಲಿದೆ ಮತ್ತು 2021-22ನೇ ಸಾಲಿನಲ್ಲಿ ಅದು ಶೇ.4.5ಕ್ಕೆ ಪುಟಿದೇಳಲಿದೆ ಎಂದು ಅದು ತನ್ನ ಇತ್ತೀಚಿನ ಸೌಥ್ ಏಶ್ಯಾ ಇಕನಾಮಿಕ್ ಪೋಕಸ್ ವರದಿಯಲ್ಲಿ ತಿಳಿಸಿದೆ. ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ವಾರ್ಷಿಕ ಸಭೆಗಳಿಗೆ ಮುನ್ನ ಈ ವರದಿ ಬಿಡುಗಡೆಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಪ್ರದೇಶದ ತಲಾದಾಯವು ಜನಸಂಖ್ಯಾ ಬೆಳವಣಿಗೆ ಮತ್ತು ಆರ್ಥಿಕ ಹಿಂಜರಿತದಿಂದಾಗಿ 2019ರ ಅಂದಾಜುಗಳಿಗಿಂತ ಶೇ.6ರಷ್ಟು ಕಡಿಮೆಯಿರಲಿದೆ. ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಬಡತನ ರೇಖೆಗಿಂತ ಕೆಳಗಿನ ಜನರ ಸಂಖ್ಯೆಯು ಒಂದೇ ವರ್ಷದಲ್ಲಿ ಶೇ.33ರಷ್ಟು ಹೆಚ್ಚಾಗಿದೆ ಎಂದು ವಿಶ್ವಬ್ಯಾಂಕಿನ ಮುಖ್ಯ ಆರ್ಥಿಕ ತಜ್ಞ (ದಕ್ಷಿಣ ಏಶ್ಯಾ) ಹ್ಯಾನ್ಸ್ ಟಿಮ್ಮರ್ ಹೇಳಿದರು.

ಕಾನ್ಫರೆನ್ಸ್ ಕಾಲ್‌ನಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಭಾರತದಲ್ಲಿ ಪರಿಸ್ಥಿತಿ ಹಿಂದೆಂದಿಗಿಂತಲೂ ಹದಗೆಟ್ಟಿದೆ. ಭಾರತದಲ್ಲಿ ಅಸಾಧಾರಣ ಸ್ಥಿತಿಯಿದೆ. ಮುನ್ನೋಟವು ಅತ್ಯಂತ ಭಯಾನಕವಾಗಿದೆ. ಅನುತ್ಪಾದಕ ಆಸ್ತಿಗಳ ಏರಿಕೆಯನ್ನು ನಾವು ಕಂಡಿದ್ದೇವೆ. ಇವೆಲ್ಲ ಭಾರತವು ಎದುರಿಸಬೇಕಿರುವ ಸವಾಲುಗಳಾಗಿವೆ ಎಂದರು. ಆದರೆ ದೇಶದ ಸೀಮಿತ ಸಂಪನ್ಮೂಲಗಳ ಹಿನ್ನೆಲೆಯಲ್ಲಿ ಭಾರತ ಸರಕಾರದ ಕ್ರಮಗಳನ್ನು ಅವರು ಪ್ರಶಂಸಿಸಿದರು.

ಕೊರೋನ ವೈರಸ್ ಹರಡುವಿಕೆ ಮತ್ತು ನಿಯಂತ್ರಣ ಕ್ರಮಗಳು ಭಾರತದಲ್ಲಿ ಪೂರೈಕೆ ಮತ್ತು ಬೇಡಿಕೆ ಸ್ಥಿತಿಗಳನ್ನು ತೀವ್ರವಾಗಿ ಹದಗೆಡಿಸಿವೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.

ಅನೌಪಚಾರಿಕ ಕ್ಷೇತ್ರವು ಸಾಮಾಜಿಕ ವಿಮೆಯ ರಕ್ಷಣೆಯಿಂದ ವಂಚಿತವಾಗಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದ ಟಿಮ್ಮರ್, ವಿಶೇಷವಾಗಿ ಆದಾಯ ಹಂಚಿಕೆಯ ಮಧ್ಯಮ ಸ್ತರದಲ್ಲಿರುವ ಅನೌಪಚಾರಿಕ ಕ್ಷೇತ್ರದ ಕಾರ್ಮಿಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಈ ಜನರಿಗೆ ಬೆಂಬಲವಾಗಿ ನಿಲ್ಲಬಲ್ಲ ಯಾವುದೇ ವ್ಯವಸ್ಥೆಯು ಅಸ್ತಿತ್ವದಲ್ಲಿಲ್ಲ ಎಂದು ಹೇಳಿದರು.

ಭಾರತದ ಅರ್ಥಿಕತೆಯು 2021-22ರಲ್ಲಿ ಸುಮಾರು ಶೇ.6ರಷ್ಟು ಪ್ರಗತಿದರದೊಂದಿಗೆ ಮತ್ತೆ ಪುಟಿದೇಳಲಿದೆ ಎಂದು ವರದಿಯು ತಿಳಿಸಿದೆ. ಆದರೆ ಇದು ಎಪ್ರಿಲ್‌ನಲ್ಲಿ ವಿಶ್ವ ಆರ್ಥಿಕ ಮುನ್ನೋಟದಲ್ಲಿ ಅಂದಾಜಿಸಿದ್ದಕ್ಕಿಂತ ಶೇ.1.4ರಷ್ಟು ಕಡಿಮೆಯಾಗಿದೆ.

2020-21ನೇ ಹಣಕಾಸು ವರ್ಷಕ್ಕೆ ಭಾರತದ ಆರ್ಥಿಕತೆ ಶೇ.4.5ರಷ್ಟು ಕುಸಿಯಲಿದೆ ಎಂದು ಐಎಂಎಫ್ ಜೂನ್‌ನಲ್ಲಿ ಹೇಳಿದ್ದರೆ, ಸೆಪ್ಟೆಂಬರ್‌ನಲ್ಲಿ ಏಶಿಯನ್ ಅಭಿವೃದ್ಧಿ ಬ್ಯಾಂಕ್ ಭಾರತದ ಆರ್ಥಿಕತೆಯು ಶೇ.9ರಷ್ಟು ತಗ್ಗಲಿದೆ. ಆದರೆ 2021-22ರಲ್ಲಿ ಅದು ಚೇತರಿಸಿಕೊಂಡು ಶೇ.8ರ ಪ್ರಗತಿದರವನ್ನು ದಾಖಲಿಸಲಿದೆ ಎಂದು ಅಂದಾಜಿಸಿತ್ತು.