Recent Posts

Sunday, January 19, 2025
ಪುತ್ತೂರು

ಮನುಷ್ಯನ ದುರಾಸೆಯೇ ಪ್ರಕೃತಿ ವಿಕೋಪಕ್ಕೆ ಕಾರಣ ಡಾ. ಶ್ರೀಷ ಕುಮಾರ್ ಎಂ.ಕೆ – ಕಹಳೆ ನ್ಯೂಸ್

ಪುತ್ತೂರು : ಅ.8 ಇಂದು ಪ್ರಕೃತಿಯ ಮುನಿಸಿಗೆ ಮಾನವನ ಕೃತ್ಯಗಳೇ ಕಾರಣ. ಒಂದು ವೇಳೆ ನಾವಿಂದು ಪ್ರಕೃತಿಗೆ ಒಲಿಯದೇ ಹೋದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿವೇಕಾನಂದ ಪದವಿ ಕಾಲೇಜಿನ ಸಂಸ್ಕøತ ಉಪನ್ಯಾಸಕರಾದ ಡಾ. ಶ್ರೀಷ ಕುಮಾರ್ ಎಂ.ಕೆ ಹೇಳಿದರು.

ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ಸಂಸ್ಕøತಿ- ಪ್ರಸ್ತುತಿ ಎಂಬ ಮೂರನೇ ಹಂತದ ಸರಣಿ ಸಂವಾದ ಕಾರ್ಯಕ್ರಮದಲ್ಲಿ ಕೊಡಗಿನ ಭೂ ಕುಸಿತಕ್ಕೆ ಕಾರಣಗಳೇನು ಹಾಗೂ ಶಿಕ್ಷಣ ಹಾಗೂ ಕಲೆಗಳು ವಿದ್ಯಾರ್ಥಿಗಳಿಗೆ ಹೇಗೆ ಪೂರಕ ಎಂಬ ವಿಚಾರದ ಬಗೆಗೆ ಸಮನ್ವಯಕಾರರಾಗಿ ಮಾತಾನಾಡಿ,ಕೊಡಗಿನ ಭೂಕುಸಿತಕ್ಕೆ ಮಾನವನ ದುರಸೆಯೇ ಕಾರಣ. ಅಭಿವೃದ್ಧಿಯ ಹೆಸರಿನಲ್ಲಿ ಇಂದು ಪ್ರಕೃತಿಯ ಮೇಲೆ ವ್ಯಭಿಚಾರವಾಗುತ್ತಿದೆ.ಹಾಗಾಗಿ ಭೂಮಿ ಹಾಗೂ ನಮ್ಮ ಬದುಕನ್ನು ಸಮಾನವಾಗಿ ಹೊಂದಿಸಿಕೊಂಡು ಅಭಿವೃದ್ಧಿಯನ್ನು ಮಾಡಬೇಕಾಗಿದೆ ಎಂದರು.
ಅಂತೆಯೇ ಕಲೆ ಮತ್ತು ಶಿಕ್ಷಣ ವಿದ್ಯಾರ್ಥಿಗಳಿಗೆ ಹೇಗೆ ಸಹಕಾರಿಯಾಗುತ್ತದೆ ಎಂಬ ವಿಚಾರದ ಬಗೆಗೂ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ,ಕಲೆ ಮತ್ತು ಶಿಕ್ಷಣಕ್ಕೆ ಅವಿನಾಭಾವ ಸಂಬಂಧವಿದೆ. ಕಲೆಯೂ ಕೂಡಾ ಒಂದು ಶಿಕ್ಷಣವೇ. ಹಾಗಾಗಿ ಕಲೆಗಳು ಹಾಗೂ ಶಿಕ್ಷಣ ಎರಡೂ ಕೂಡಾ ವಿದ್ಯಾರ್ಥಿಗಳ ಬದುಕನ್ನು ಹಸನಾಗಿಸಬಹುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಸಂದರ್ಭದಲ್ಲಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಸ್ವಾತಿ ಕೆ.ಎಸ್ ಕೊಡಗಿನ ಭೂಕುಸಿತಕ್ಕೆ ಕಾರಣಗಳೇನು ಎಂಬ ವಿಚಾರದ ಬಗೆಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿ, ಕೊಡಗಿನಲ್ಲಿ ಪ್ರವಾಸಿಗರನ್ನು ಅಕರ್ಷಿಸಲು ಅರಣ್ಯ ಸಂಪತ್ತುಗಳನ್ನು ಯಥೇಚ್ಛವಾಗಿ ನಾಶಪಡಿಸಲಾಗಿದೆ. ಇದರಿಂದಾಗಿ ಮಣ್ಣಿನ ಸವಕಳಿ ಉಂಟಾಗಿ ನೀರಿನ ಒತ್ತಡವನ್ನು ತಡೆಯಲಾಗದೆ ಭೂಕುಸಿತಗಳಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಅನ್ನಪೂರ್ಣಿಕ ಪ್ರಭು ಶಿಕ್ಷಣ ಮತ್ತು ಕಲೆಗಳು ವಿದ್ಯಾರ್ಥಿಗಳಿಗೆ ಹೇಗೆ ಪೂರಕ ಎನ್ನುವ ವಿಚಾರದ ಬಗೆಗೆ ಮಾತನಾಡಿ, ಶಿಕ್ಷಣ ಮತ್ತು ಕಲೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಶಿಕ್ಷಣ ಹೇಗೆ ವಿದ್ಯಾರ್ಥಿಗಳ ಬದುಕನ್ನು ಉನ್ನತಿಗೊಳಿಸುತ್ತದೆಯೋ ಅದೇ ರೀತಿ ಕಲೆಗಳೂ ಕೂಡ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಹಸನು ಮಾಡುತ್ತದೆ ಎಂದರು.
ಕಾರ್ಯಕ್ರಮಕ್ಕೆ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಚಳ್ಳಂಗಾರು ಹಾಗೂ ಕಾಲೇಜಿನ ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಇವರು ಶುಭಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ವಿ.ಜಿ.ಭಟ್, ಸಮನ್ವಯಕರಾದ ಡಾ. ಶ್ರೀಷ ಕುಮಾರ್ ಎಂ.ಕೆ. , ಉಪನ್ಯಾಸಕಿಯರಾದ ಶ್ರೀಮತಿ ಸ್ವಾತಿ.ಕೆ.ಎಸ್., ಶ್ರೀಮತಿ ಅನ್ನಪೂರ್ಣಿಕ ಪ್ರಭು ಉಪಸ್ಥಿತರಿದ್ದರು. ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಕುಮಾರಿ. ಅಕ್ಷತಾ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು