Recent Posts

Sunday, January 19, 2025
ಹೆಚ್ಚಿನ ಸುದ್ದಿ

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಈಗ ಬಿಜೆಪಿ ಮಿತ್ರಪಕ್ಷಗಳ ಏಕೈಕ ಪ್ರತಿನಿಧಿ-ಕಹಳೆ ನ್ಯೂಸ್

ಹೊಸದಿಲ್ಲಿ, ಅ.10: ಎಲ್‌ಜೆಪಿ ಮುಖಂಡ ರಾಮ್‌ವಿಲಾಸ್ ಪಾಸ್ವಾನ್ ಅವರ ನಿಧನದೊಂದಿಗೆ, ಕೇಂದ್ರದ ಅಧಿಕಾರಾರೂಢ ಎನ್‌ಡಿಎ ಮೈತ್ರಿಕೂಟ ಸಂಪುಟದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಮದಾಸ್ ಅಠಾವಳೆ ಅವರನ್ನು ಹೊರತುಪಡಿಸಿ, ಎಲ್ಲ ಬಿಜೆಪಿಯೇತರ ಮುಖ ಮಾಯವಾದಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಮಿತ್ರಪಕ್ಷಗಳು ಹಲವು ಸಂಸದರನ್ನು ಹೊಂದಿದ್ದರೂ, ಸಂಪುಟ ಮಾತ್ರ ಇದೀಗ ಬಹುತೇಕ ಬಿಜೆಪಿಗೆ ಸೀಮಿತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಳಿಕ ಅಧಿಕಾರ ಹಂಚಿಕೆ ಸಂಘರ್ಷದ ಹಿನ್ನೆಲೆಯಲ್ಲಿ ತನ್ನ ಪ್ರತಿನಿಧಿ ಅರವಿಂದ್ ಸಾವಂತ್ ಅವರನ್ನು ಶಿವಸೇನೆ ವಾಪಸ್ ಕರೆಸಿಕೊಂಡಿತ್ತು. ನೂತನ ಕೃಷಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳದ ಹರ್‌ಸಿಮ್ರತ್ ಕೌರ್ ಬಾದಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಹಿರಿಯ ಎಲ್‌ಜೆಪಿ ಮುಖಂಡ ರಾಮ್‌ವಿಲಾಸ್ ಪಾಸ್ವಾನ್ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟವನ್ನು ಶೀಘ್ರವೇ ಪುನರ್ರಚಿಸಲಾಗುತ್ತದೆ ಎಂಬ ವದಂತಿಗಳು ಕೇಳಿಬರುತ್ತಿವೆ.

ಬಿಜೆಪಿ ಸೇರ್ಪಡೆಯಾಗಿರುವ ಕಾಂಗ್ರೆಸ್‌ನ ಬಂಡಾಯ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಬಿಜೆಪಿ ನಾಯಕತ್ವ ಬಿಹಾರ ಚುನಾವಣೆಯ ಸಿದ್ಧತೆಯಲ್ಲಿರುವುದರಿಂದ ನವೆಂಬರ್ ಮಧ್ಯದವರೆಗೆ ಈ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಎನ್‌ಡಿಎಯಲ್ಲಿ ಇದೀಗ ಉಳಿದಿರುವ ಮಿತ್ರ ಪಕ್ಷಗಳ ಪೈಕಿ ಜೆಡಿಯು ಅತಿಹೆಚ್ಚು ಸಂಸದರನ್ನು ಹೊಂದಿದೆ. ಆದರೆ ಜೆಡಿಯು ಸರಕಾರದಿಂದ ಹೊರಗುಳಿದಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅಂತೆಯೇ ಎಲ್‌ಜೆಪಿ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಕೂಟದಿಂದ ಹೊರಹೋಗಿ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಪಕ್ಷ ಕೂಡಾ ಸಂಪುಟ ಸೇರುವ ಸಾಧ್ಯತೆ ಅನಿಶ್ಚಿತವಾಗಿದೆ.

ಐದು ವರ್ಷಗಳ ಕಾಲ ರಾಜ್ಯ ಸಚಿವೆಯಾಗಿದ್ದ ಅಪ್ನಾ ದಳ ಸಂಸದೆ ಅನುಪ್ರಯಾ ಪಾಟೀಲ್, 2019ರಲ್ಲಿ ಮತ್ತೆ ಅವಕಾಶ ಪಡೆದಿರಲಿಲ್ಲ. ಅವರು ಸಂಪುಟ ದರ್ಜೆ ಸ್ಥಾನ ಆಗ್ರಹಿಸಿದ್ದರು ಎನ್ನಲಾಗಿದ್ದು, ಬಿಜೆಪಿ ಅದಕ್ಕೆ ನಿರಾಕರಿಸಿತ್ತು.