Tuesday, November 19, 2024
ಪುತ್ತೂರು

ಅನುತ್ತೀರ್ಣರಾದವರ ದಾರಿದೀಪವಾದ ಪ್ರಗತಿ ಸ್ಟಡಿ ಸೆಂಟರ್, ಪುತ್ತೂರು- ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಟಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜುಕೇಶನಲ್ ಫೌಂಡೇಶನ್(ರಿ.) ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್‍ಗೆ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗಾಗಿಯೇ ಕಳೆದ 13 ವರುಷಗಳಿಂದ ತನ್ನ ಸೇವೆಯನ್ನು ನೀಡುತ್ತಾ ಬಂದಿದ್ದು, 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.92% ಫಲಿತಾಂಶ ಪಡೆದುಕೊಂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮರುಪರೀಕ್ಷೆಯಲ್ಲಿ ದಾಖಲೆಯ 96% ಫಲಿತಾಂಶ ಬಂದಿರುತ್ತದೆ. ದ.ಕ, ಉಡುಪಿ, ಕೊಡಗು, ಚಿಕ್ಕಮಂಗಳೂರು, ಶಿವಮೊಗ್ಗ, ಬೆಂಗಳೂರು ಜಿಲ್ಲೆಗಳಿಂದ ಆನ್‍ಲೈನ್ ತರಗತಿಯಲ್ಲಿ 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಆಫ್‍ಲೈನ್ ತರಗತಿಯಲ್ಲಿ 18 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದು, ಒಟ್ಟು 78 ವಿದ್ಯಾರ್ಥಿಗಳಲ್ಲಿ 75 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.
ಮೊಹಮ್ಮದ್ ಯಾಸಿನ್(ಚಿಕ್ಕಮಂಗಳೂರು) 5ವಿಷಯಗಳಲ್ಲಿ, ಅಶ್ವಿನಿ(ಮಡಿಕೇರಿ) 3 ವಿಷಯಗಳಲ್ಲಿ, ಅನುತ್ತೀರ್ಣಗೊಂಡು ಪ್ರಗತಿ ಸಂಸ್ಥೆಯ ತರಬೇತಿ ತರಗತಿಯ ಸದುಪಯೋಗ ಪಡೆದುಕೊಂಡು ಮರುಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಹೊಂದಿದ್ದಾರೆ. Live Online clasessನಲ್ಲಿ ತರಬೇತಿ ಪಡೆದ 60 ವಿದ್ಯಾರ್ಥಿಗಳಲ್ಲಿ, 60 ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ತೇರ್ಗಡೆಹೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಕೆ.ಹೇಮಲತಾ ಗೋಕುಲ್‍ನಾಥ್‍ರವರು ತಿಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು