Recent Posts

Sunday, January 19, 2025
ಹೆಚ್ಚಿನ ಸುದ್ದಿ

ಜನರಿಂದ ಐಡಿಯಾ ಕೇಳಿದ ಪ್ರಧಾನಿ ನರೇಂದ್ರ ಮೋದಿ- ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ಮೋದಿಯವರು ಈ ರೀತಿ ಕೆಲ್ಸ ಮಾಡ್ಬೋದು, ಆ ರೀತಿಯಲ್ಲಿಯೂ ಶ್ರಮಿಸ್ಬೋದು ಅಂತಾ ಅದೆಷ್ಟೊ ಮಂದಿ ಹೇಳ್ತಾ ಇರ್ತಾರೆ. ಅಂತಹವರಿಗೆ ಪ್ರಧಾನಿ ಮೋದಿಯವರೇ ಒಂದು ವೇದಿಕೆ ಕಲ್ಪಿಸಿದ್ದು, ನಿಮ್ಮ ಐಡಿಯಾಗಳನ್ನ ನೇರವಾಗಿ ನನಗೆ ತಿಳಿಸಿ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು,ಪ್ರಧಾನಿ ನರೇಂದ್ರ ಮೋದಿ ಇದೀಗ ಜನರಿಂದ ಐಡಿಯಾ ಕೇಳಿದ್ದಾರೆ. ‘ಮನ್​ ಕಿ ಬಾತ್​’ ಮೂಲಕ ಆಗಾಗ ತಮ್ಮ ಮನದ ಅನಿಸಿಕೆಗಳನ್ನ ಹಂಚಿಕೊಳ್ಳುವ ಮೋದಿ, ಆ ಮೂಲಕ ಸಾಮಾಜಿಕ ಪರಿವರ್ತನೆಗಾಗಿ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರ ಕುರಿತು ಕೂಡ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ.
ಈಗ ಅಂಥ ಸಾಧಕರ ಬಗ್ಗೆ ಹಾಗೂ ಸಾಮಾಜಿಕ ಪರಿವರ್ತನೆಗಾಗಿ ತಮ್ಮಲ್ಲಿರುವ ಯೋಚನೆ-ಯೋಜನೆಗಳ ವಿಚಾರಗಳಿದ್ದರೇ ನನ್ನಲ್ಲಿ ಹಂಚಿಕೊಳ್ಳಿ ಎಂದಿದ್ದಾರೆ ಎಂದು ಜನರಿಗೆ ಟ್ವೀಟ್ ಮೂಲಕ ಕರೆ ನೀಡಿದ್ದಾರೆ ಮೋದಿ. ಅದ್ರಂತೆ, ಅ. 25ರಂದು ನಡೆಯುವ ‘ಮನ್​ ಕಿ ಬಾತ್’ ಕಾರ್ಯಕ್ರಮದಲ್ಲಿ ಅವರು ಅಂಥ ಆಯ್ದ ಐಡಿಯಾ/ಸಾಧಕರ ಕುರಿತು ತಮ್ಮ ಮಾತಿನಲ್ಲಿ ಉಲ್ಲೇಖಿಸಲಿದ್ದಾರೆ ಎನ್ನಲಾಗ್ತಿದ್ದು, ಆಸಕ್ತರು ಪ್ರಧಾನಿ ಮೋದಿಗೆ ಐಡಿಯಾಗಳನ್ನ ಕಳಿಸಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು