Recent Posts

Sunday, January 19, 2025
ಹೆಚ್ಚಿನ ಸುದ್ದಿ

ಇನ್ಮುಂದೆ ‘ಮೂಗರ್ಜಿ’ಗಳಿಗೆ ಮಾನ್ಯತೆ ಇಲ್ಲ : ರಾಜ್ಯಸರ್ಕಾರದಿಂದ ‘ಅನಾಮಧೇಯ ಪತ್ರ’ಗಳನ್ನು ಪರಿಗಣಿಸದಂತೆ ಆದೇಶ-ಕಹಳೆ ನ್ಯೂಸ್

ಬೆಂಗಳೂರು : ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ಅನಾಮಧೇಯ ಪತ್ರಗಳ ಮೂಲಕ ಆರೋಪ ಮಾಡುತ್ತಿದ್ದಂತ ಪತ್ರಗಳಿಗೆ, ಇದೀಗ ಸರ್ಕಾರ ಬ್ರೇಕ್ ಹಾಕಿದೆ. ಇನ್ಮುಂದೆ ಮೂಗರ್ಜಿಗಳಿಗೆ ಮಾನ್ಯತೆ ಇಲ್ಲ ಎಂಬುದಾಗಿ ಖಡಕ್ ಆದೇಶದಲ್ಲಿ ಸೂಚಿಸಿದೆ. ಈ ಮೂಲಕ ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಪರಿಗಣಿಸದಂತೆ ಸುತ್ತೋಲೆಯಲ್ಲಿ ಸೂಚಿಸಿದೆ.


ಈ ಕುರಿತಂತೆ ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆಯಲ್ಲಿ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ತಿಳಿಸಿದ್ದು, ಇನ್ಮುಂದೆ ಮೂಗರ್ಜಿಗಳನ್ನು ಪರಿಗಣಿಸಬಾರದು. ವಿಳಾಸ ಇರುವ ದೂರುಗಳನ್ನ ಮಾತ್ರವೇ ಸ್ವೀಕರಿಸಬೇಕು. ಸೂಕ್ತ ದಾಖಲೆ ಇಲ್ಲದ ದೂರುಗಳ್ನು ಪರಿಗಣಿಸಬೇಡಿ. ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಮಾನ್ಯ ಮಾಡದಂತೆ ಸೂಚಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇನ್ಮುಂದೆ ವಿಳಾಸ, ಹೆಸರು ಇಲ್ಲದೇ ಯಾವುದೇ ಸರ್ಕಾರಿ ಅಧಿಕಾರಿ, ನೌಕರರ ಮೇಲೆ ಅನಾಮಧೇಯ ಪತ್ರದಲ್ಲಿ ದೂರು ಕಳುಹಿಸಿದ್ರೇ.. ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಮೂಗರ್ಜಿಗಳಿಗೆ ಮಾನ್ಯತೆ ಕೂಡ ನೀಡುವುದಿಲ್ಲ. ಈ ಮೂಲಕ ರಾಜ್ಯದ ಸರ್ಕಾರಿ ನೌಕರಿಗೆ ಬಿಗ್ ರಿಲೀಫ್ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು