Tuesday, November 19, 2024
ಹೆಚ್ಚಿನ ಸುದ್ದಿ

ಆಸ್ತಿ ಕಾರ್ಡ್ ವಿತರಿಸುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ಚಾಲನೆ- ಕಹಳೆ ನ್ಯೂಸ್

ನವದೆಹಲಿ : ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನ (SVAMITVA) ಯೋಜನೆಯಡಿ ಪ್ರಾಪರ್ಟಿ ಕಾರ್ಡ್ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಗ್ರಾಮೀಣ ಪರಿವರ್ತನೆಗೆ ಇದೊಂದು ಐತಿಹಾಸಿಕ ಪ್ರಯತ್ನ ಎಂದು ಪಿಎಂ ನರೇಂದ್ರ ಮೋದಿ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನ ಯೋಜನೆಯಡಿ ಪ್ರಾಪರ್ಟಿ ಕಾರ್ಡ್ ಬಿಡುಗಡೆ ಬಳಿಕ, ಪಿಎಂ ಮೋದಿ ಅವರು ಯೋಜನೆಯ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಈ ಸುಧಾರಿತ ತಂತ್ರಜ್ಞಾನ ಯೋಜನೆಯಡಿಯ ಪ್ರಾಪರ್ಟಿ ಕಾರ್ಡ್ ವಿತರಣೆಯಿಂದ ಸುಮಾರು ಒಂದು ಲಕ್ಷ ಆಸ್ತಿ ಹೊಂದಿರುವವರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಡೆಲಿವರಿ ಮಾಡುವ ಎಸ್ ಎಂಎಸ್ ಲಿಂಕ್ ಮೂಲಕ ತಮ್ಮ ಆಸ್ತಿ ಕಾರ್ಡ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಪ್ರಕಟಣೆ ತಿಳಿಸಿದೆ.
ಈ ಆಧಾರ್ ರೀತಿಯ ಆಸ್ತಿ ಕಾರ್ಡ್ ಗಳು ಹಳ್ಳಿಗರ ಮನೆ ಮತ್ತು ಅವರು ಹೊಂದಿರುವ ಸುತ್ತಮುತ್ತಲಿನ ಪ್ರದೇಶಗಳ ಆಸ್ತಿ ಹಕ್ಕುಪತ್ರಗಳ ಭೌತಿಕ ಪ್ರತಿಗಳಾಗಿವೆ (ಸಾಗುವಳಿ ಭೂಮಿಗೆ ವಿರುದ್ಧ). ಉತ್ತರ ಪ್ರದೇಶದ 346, ಹರಿಯಾಣದಿಂದ 221, ಮಹಾರಾಷ್ಟ್ರದ 100, ಮಧ್ಯ ಪ್ರದೇಶದ 44, ಉತ್ತರಾಖಂಡದ 50 ಹಾಗೂ ಕರ್ನಾಟಕದ 2 ಸೇರಿದಂತೆ 763 ಗ್ರಾಮಗಳ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯನ್ನು ಹಂತ ಹಂತವಾಗಿ ದೇಶಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ ಎಂಬುದಾಗಿ ತಿಳಿಸಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಪಂಚಾಯತ್ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ಯಾದವ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು