Wednesday, November 20, 2024
ಶಿಕ್ಷಣಸುದ್ದಿ

ನೀಟ್ ಪರೀಕ್ಷೆ ಫಲಿತಾಂಶ ಇಂದು ಪ್ರಕಟ ಸಾಧ್ಯತೆ; ರಿಸಲ್ಟ್​ ಲಿಂಕ್ ಇಲ್ಲಿದೆ-ಕಹಳೆ ನ್ಯೂಸ್

ನೀಟ್ ಪರೀಕ್ಷೆಗಳ ಫಲಿತಾಂಶವನ್ನು ಅಕ್ಟೋಬರ್ 12ರಂದು ಪ್ರಕಟಿಸಲಾಗುವುದು ಎಂದು ಪರೀಕ್ಷಾ ಮಂಡಳಿ ತಿಳಿಸಿತ್ತು. ಅದರಂತೆ ಇಂದು ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ. ಕೊರೋನಾ ಪ್ರೋಟೋಕಾಲ್ ನಡುವೆಯೂ ಸೆಪ್ಟೆಂಬರ್ 14ರಂದು ನೀಟ್ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಪ್ರಕಟವಾದ ನಂತರ nta.ac.in, ntaneet.nic.in ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು. ಪರೀಕ್ಷೆ ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ….

ಅಧಿಕೃತ ವೆಬ್​ಸೈಟ್ ntaneet.nic.in ಗೆ ಹೋಗಿ. ವೆಬ್​ಸೈಟ್​ನಲ್ಲಿರುವ ಡೌನ್​ಲೋಡ್​ ರಿಸಲ್ಟ್​ ಎಂಬಲ್ಲಿ ಕ್ಲಿಕ್ ಮಾಡಿ,ನಿಮ್ಮ ರಿಜಿಸ್ಟ್ರೇಷನ್ ನಂಬರ್, ರೋಲ್ ನಂಬರ್ ನಮೂದಿಸಿ.ಆಗ ನಿಮ್ಮ ಫಲಿತಾಂಶ ವೆಬ್​ಸೈಟ್​ನ ಸ್ಕ್ರೀನ್ ಮೇಲೆ ಕಾಣುವುದು. ಆ ಫಲಿತಾಂಶದ ಸ್ಕ್ರೀನ್ ಅನ್ನು ಡೌನ್​ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಂಬಿಬಿಎಸ್/ ಬಿಎಸ್​ಡಿ ಕೋರ್ಸ್​ಗಳಿಗೆ ಅಭ್ಯರ್ಥಿಗಳು ನೀಟ್​ನಲ್ಲಿ ಶೇ. 50ರಷ್ಟು ಅಂಕ ಪಡೆದು ತೇರ್ಗಡೆಯಾಗಬೇಕು. ಎಸ್​ಸಿ, ಎಸ್​ಟಿ ಅಭ್ಯರ್ಥಿಗಳು ಶೇ. 40 ಅಂಕ ಪಡೆಯಬೇಕು. ಪಿಡಬ್ಲ್ಯುಡಿ ಅಭ್ಯರ್ಥಿಗಳು ಶೇ 45 ಅಂಕ ಪಡೆಯಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು