Wednesday, November 20, 2024
ಹೆಚ್ಚಿನ ಸುದ್ದಿ

ಮುಖ್ಯಮಂತ್ರಿಗಳು ಮೋದಿಗಾಗಿ ಜನರ ಭವಿಷ್ಯ ಅಡವಿಡುತ್ತಿದ್ದಾರೆ :ರಾಹುಲ್ ಗಾಂಧಿ ವಾಗ್ದಾಳಿ – ಕಹಳೆ ನ್ಯೂಸ್

ನವದೆಹಲಿ, ಅಕ್ಟೋಬರ್ 12:ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮೋದಿಗಾಗಿ ಜನರನ್ನು ಅಡವಿಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ನಡೆಯುವ ಜಿಎಸ್‌ಟಿ ಸಭೆಗೂ ಮುನ್ನ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರವು ಶ್ರೀಮಂತರಿಗಾಗಿ ಕೆಲಸ ಮಾಡುತ್ತದೆ. ಅದರ ಜತೆ ಜತೆಯಲ್ಲೇ ಎಂಟು ಸಾವಿರ ಕೋಟಿ ವಿಮಾನವನ್ನೂ ಖರೀದಿಸಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ ಮಾಡಿ, ಕೇಂದ್ರ ಸರ್ಕಾರವು ರಾಜ್ಯಗಳಿಂದ ಜಿಎಸ್‌ಟಿ ರಾಜಸ್ವ ನೀಡುವ ಭರವಸೆ ನೀಡಿದ್ದರು.
-ಪ್ರಧಾನ ಮಂತ್ರಿ ಹಾಗೂ ಕೊವಿಡ್ ಭಾರತದ ಅರ್ಥವ್ಯವಸ್ಥೆಯನ್ನು ನುಚ್ಚುನೂರು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

-8400 ಕೋಟಿ ಮೌಲ್ಯದ ವಿಮಾನ ಖರೀದಿ

– ಕೇಂದ್ರದ ಬಳಿ ರಾಜ್ಯಗಳಿಗೆ ನೀಡಲು ಹಣವಿಲ್ಲ

– ಮುಖ್ಯಮಂತ್ರಿಗಳು ಮೋದಿಗಾಗಿ ಯಾಕೆ ಜನರ ಜೀವವನ್ನು ಅಡವಿಡುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ರಾಜ್ಯಗಳಿಗೆ ತೆರಿಗೆ ವರಮಾನದ ಕೊರತೆ ತುಂಬಿಕೊಡುವ ಕುರಿತು ಚರ್ಚಿಸಲು ಜಿಎಸ್‌ಟಿ ಮಂಡಳಿಯು ಇಂದು ಸಭೆ ಸೇರಲಿದೆ. ರಾಜ್ಯಗಳಿಗೆ ಪರಿಹಾರ ನೀಡುವ ಸಂಬಂಧ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಸಚಿವರ ತಂಡ ರಚಿಸಬೇಕು ಎಂದು ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಕಳೆದ ವಾರ ನಡೆದ ಸಭೆಯಲ್ಲಿ ಒತ್ತಾಯಿಸಿದ್ದವು. ಜಿಎಸ್‌ಟಿ ಜರಿಗೊಳಿಸಿದ್ದರಿಂದ ರಾಜ್ಯಗಳಿಗೆ ಈ ವರ್ಷದ ಆದಾಯದಲ್ಲಿ 97 ಸಾವಿರ ಕೋಟಿ ರೂ. ಕೊರತೆ ಆಗಿದೆ ಎಂದು ಕೇಂದ್ರ ಅಂದಾಜು ಮಾಡಿದೆ. ಕೊವಿಡ್ 19 ಕಾರಣದಿಂದ ರಾಜ್ಯಗಳಿಗೆ ಅಗಿರುವ ಕೊರತೆ 1.38 ಲಕ್ಷ ಕೋಟಿ. ಒಟ್ಟಾರೆ ಕೊರತೆ 2.35 ಲಕ್ಷ ಕೋಟಿ ರೂ. ಆಗಿದೆ.