Sunday, January 19, 2025
ಸುದ್ದಿ

ನಾನೊಬ್ಬ ರಾಮ ಭಕ್ತ- ಕಾಶ್ಮೀರ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ – ಕಹಳೆ ನ್ಯೂಸ್

ಮಾ,19: ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿಯೇ ಸುದ್ದಿಯಾಗುತ್ತಿದ್ದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಇದೀಗ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಮುಸ್ಲಿಮನಾಗಿದ್ದರೂ ನಾನು ರಾಮಭಕ್ತ ಎಂದು ಹೇಳಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ನಮ್ಮ ದೇಶವನ್ನು ನಾವೇ ರಕ್ಷಿಸಿಕೊಳ್ಳಬೇಕು ಎಂದು ಹೇಳಿರುವ ಫಾರೂಕ್ ಅಬ್ದುಲ್ಲಾ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಆದರೂ ಪಾಕ್ ವಶದಲ್ಲಿರುವ ಕಾಶ್ಮೀರವನ್ನು ಭಾರತ ವಾಪಸ್ ಪಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ತಾನು ಮುಸ್ಲಿಮನಾಗಿದ್ದರೂ ರಾಮನನ್ನು ಇಷ್ಟಪಡುತ್ತೇನೆ, ನಾನೂ ರಾಮಭಕ್ತ ಎಂದು ಹೇಳಿ ಎಲ್ಲರನ್ನು ದಂಗುಬಡಿಸಿದ್ದಾರೆ.

ಖಾಸಗಿ ವಾಹಿನಿಯೊಂದು ಆಯೋಜಿಸಿದ ಕಾನ್ಕ್ಲೇವ್ ನಲ್ಲಿ ಭಾಗವಹಿಸಿದ್ದ ವೇಳೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿರುವ ಫಾರೂಕ್ ಅಬ್ದುಲ್ಲಾ, ಪಾಕಿಸ್ತಾನ ಹಾಗೂ ರಾಷ್ಟ್ರವಿರೋಧಿತ್ವ ಇದು ದೇಶಕ್ಕೆ ಅಪಾಯಕಾರಿ ಅಂತ ಹೇಳಿದ್ದು, ಆಂತರಿಕ ಅಪಾಯವೇ ಎಲ್ಲದಕ್ಕಿಂತ ದೊಡ್ಡ ಅಪಾಯ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು