Wednesday, November 20, 2024
ಹೆಚ್ಚಿನ ಸುದ್ದಿ

ಹೈಸ್ಪೀಡ್ ರೈಲುಗಳಲ್ಲಿ ‘ಸ್ಲೀಪರ್ ಕೋಚ್’ ಗಳನ್ನು ರದ್ದುಪಡಿಸಿದ ರೈಲ್ವೆ ಇಲಾಖೆ.! ಇಲ್ಲಿದೆ ಮಾಹಿತಿ-ಕಹಳೆ ನ್ಯೂಸ್

ನವದೆಹಲಿ : ಹೈಸ್ಪೀಡ್ ರೈಲುಗಳಿಗಾಗಿ ಹವಾನಿಯಂತ್ರಿತವಲ್ಲದ (ಎಸಿ) ಸ್ಲೀಪರ್ ಕೋಚ್ ಗಳನ್ನು ಎಸಿ ಬೋಗಿಗಳಿಗೆ ಮೇಲ್ದರ್ಜೆಗೇರಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ರೈಲ್ವೆಯ ಅಧಿಕೃತ ಹೇಳಿಕೆಯ ಪ್ರಕಾರ, AC ಕೋಚ್ ಗಳು ಮೂಲಭೂತವಾಗಿ 130/160 kmph ವೇಗದಲ್ಲಿ ಚಲಿಸುವ ರೈಲುಗಳ ತಾಂತ್ರಿಕ ಅವಶ್ಯಕತೆಯಾಗಿದೆ. ‘ಕೆಲವು ಕಾರಿಡಾರ್ ಗಳ ವೇಗ ಸಾಮರ್ಥ್ಯವನ್ನು ಈಗಾಗಲೇ 130 ಕಿ.ಮೀ.ಗೆ ಏರಿಸಲಾಗಿದೆ. ಹೀಗಾಗಿ, ಹೈಸ್ಪೀಡ್ ರೈಲುಗಳಿಗೆ ಎಲ್ಲ ಎಸಿ ಯೇತರ ಕೋಚ್ ಗಳನ್ನು ಮೇಲ್ದರ್ಜೆಗೇರಿಸಲು ಸಾಧ್ಯವಿಲ್ಲ’ ಎಂದು ರೈಲ್ವೆ ಇಲಾಖೆ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ಇಂತಹ ಎಸಿ ಕೋಚ್ ನ ಮಾದರಿ ಯೊಂದನ್ನು ತಯಾರಿಸಲಾಗುತ್ತಿದೆ ಮತ್ತು ಅದು ಕೆಲವೇ ವಾರಗಳಲ್ಲಿ ಸಿದ್ಧಗೊಳ್ಳಬೇಕಾಗಿದೆ ಎಂದು ಅದು ಹೇಳಿದೆ. ‘ಪ್ರಸ್ತುತ 83 ಬರ್ತ್ ಗಳ ಕೋಚ್ ಅನ್ನು ವಿನ್ಯಾಸಗೊಳಿಸಲಾಗುತ್ತಿದೆ. ಈ ವರ್ಷ 100 ಕೋಚ್ ಗಳನ್ನು ಮತ್ತು ಮುಂದಿನ ವರ್ಷ 200 ಬೋಗಿಗಳನ್ನು ಹೊಂದಲಿದ್ದೇವೆ. ಅದರ ಆಧಾರದ ಮೇಲೆ ಕೋಚ್ ಗಳ ಮೌಲ್ಯಮಾಪನ ಮಾಡಿ, ಮುಂದಿನ ಪ್ರಗತಿ ಯನ್ನು ಮಾಡಲಾಗುವುದು ಅಂಥ ತಿಳಿಸಿದೆ.