Recent Posts

Wednesday, November 20, 2024
ಹೆಚ್ಚಿನ ಸುದ್ದಿ

ಈ ವಸ್ತುಗಳ ಮೇಲೆ 28 ದಿನ ಜೀವಂತವಾಗಿರುತ್ತೆ ವೈರಸ್-ಕಹಳೆ ನ್ಯೂಸ್

ನವದೆಹಲಿ: ನೋಟುಗಳು, ಗ್ಲಾಸ್‌ಗಳು, ಸ್ಮಾರ್ಟ್‌ ಫೋನ್‌ನ ಸ್ಕ್ರೀನ್‌ಗಳು, ಸ್ಟೇನ್‌ಲೆಸ್ ಸ್ಟೀಲ್‌ಗಳ ಮೇಲೆ ಕೊರೊನಾ ಸೋಂಕು 28 ದಿನ ಕಾಲ ಸಕ್ರಿಯವಾಗಿ ಉಳಿಯಬಲ್ಲದು ಎಂದು ಆಸ್ಟ್ರೇಲಿಯ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಅಧ್ಯಯನ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜರ್ನಲ್‌ವೊಂದರಲ್ಲಿ ಪ್ರಕಟವಾದ ವರದಿ ಅನುಸಾರ, ಸುದೀರ್ಘ ಕಾಲ ಸೋಂಕು ಕೆಲವೊಂದು ವಸ್ತುಗಳ ಮೇಲೆ ಸಕ್ರಿಯವಾಗಿ ಇರಬಹುದಾಗಿದೆ. ಹೀಗಾಗಿ, ಆಗಾಗ್ಗೆ ಬಳಸುವ ಸ್ಥಳವನ್ನು ಸ್ವಚ್ಛವಾಗಿಡುವುದು ಮತ್ತು ಕೈಗಳನ್ನು ಆಗಾಗ್ಗೆ ತೊಳೆಯುವುದು ಅಗತ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಸ್ಟೇಲಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿಪೇರ್ಡ್‌ನೆಸ್ (ಎಸಿಡಿಪಿ) ಈ ಅಧ್ಯಯನ ನಡೆಸಿದೆ. ಕಡಿಮೆ ತಾಪಮಾನದ ಪರಿಸರದಲ್ಲಿ ನಯವಾದ ವಸ್ತುಗಳು ಅಂದರೆ ಗ್ಲಾಸ್‌, ಸ್ಟೇನ್‌ಲೆಸ್‌ ಸ್ಟೀಲ್‌, ವಿನಿಲ್‌ ಮೇಲೆ ದೀರ್ಘಕಾಲ ಸೋಂಕು ಉಳಿಯಲಿದೆ. ಪ್ಲಾಸ್ಟಿಕ್‌ನ ಬ್ಯಾಂಕ್ ನೋಟುಗಳಿಗಿಂತಲೂ ಕಾಗದದ ಕರೆನ್ಸಿಯ ಮೇಲೆ ಹೆಚ್ಚಿನ ಕಾಲ ಇರಲಿದೆ ಎಂದು ಹೇಳಿದೆ.

ಎಷ್ಟು ಕಾಲ ಸೋಂಕು ಇರಬಲ್ಲದು ಎಂಬುದು ಸ್ಪಷ್ಟವಾದರೆ ಅದು ಹರಡುವ ವೇಗವನ್ನು ಗುರುತಿಸಬಹುದಾಗಿದೆ. ಇದರಿಂದ ಜನರನ್ನು ರಕ್ಷಿಸುವ ಕಾರ್ಯವೂ ಉತ್ತಮವಾಗಲಿದೆ ಎಂದು ಸಿಎಸ್‌ಐಆರ್‌ಒ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಲ್ಯಾರಿ ಮಾರ್ಷಲ್‌ ಹೇಳಿದರು.

ಸಾಮಾನ್ಯವಾಗಿ ಕೊಠಡಿಯ ಸರಾಸರಿ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಆಗಿರಲಿದೆ. ಇಂಥ ಪರಿಸರದಲ್ಲಿ ನವಿರಾದ ವಸ್ತುಗಳಲ್ಲಿ 28 ದಿನ ಕಾಲ ಸೋಂಕು ಇರಬಲ್ಲದು. ತಾಪಮಾನ ಹೆಚ್ಚಿರುವ ಕಡೆ ಸೋಂಕಿನ ಜೀವಿತಾವಧಿಯು ಕಡಿಮೆ ಇರುವುದನ್ನು ಅಧ್ಯಯನದಲ್ಲಿ ಗುರುತಿಸಲಾಗಿದೆ ಎಂದು ಎಸಿಡಿಪಿಯ ಉಪ ನಿರ್ದೇಶಕ ಡಬಿ ಈಗಲ್ಸ್‌ ಅವರು ತಿಳಿಸಿದ್ದಾರೆ.