ನೊಯ್ಡಾ (ಉತ್ತರ ಪ್ರದೇಶ): ಕಾರಿನಲ್ಲಿ ಎ.ಸಿ ಆನ್ ಮಾಡಿಕೊಂಡು, ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಮಲಗುವ ಅಭ್ಯಾಸ ಇದೆಯೆ? ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ನೋಡಿ, ಅದು ಎಷ್ಟು ಅಪಾಯಕಾರಿ ಎನ್ನುವುದು ತಿಳಿಯುತ್ತದೆ.
ಇಂಥ ಒಂದು ಅಪಾಯಕಾರಿ ಘಟನೆ ನಡೆದಿರುವುದು ಉತ್ತರ ಪ್ರದೇಶದ ನೊಯ್ಡಾದಲ್ಲಿ. ಮದ್ಯಪಾನ ಮಾಡಿ, ಕಾರಿನಲ್ಲಿ ಎ.ಸಿ ಹಾಕಿ ಮಲಗಿದ್ದ ವ್ಯಕ್ತಿ ಮರುದಿನ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಸುಂದರ್ ಪಂಡಿತ್ ಎಂದು ಗುರುತಿಸಲಾಗಿದೆ. ಇವರು ಮೊನ್ನೆ ರಾತ್ರಿ ಮದ್ಯಪಾನ ಮಾಡಿ ಕಾರಿನಲ್ಲಿ ಮಲಗಿದ್ದು, ಕಾರಿ ಕಿಟಕಿಯೆಲ್ಲವೂ ಮುಚ್ಚಿತ್ತು. ಮಾರನೆಯ ದಿನ ನೋಡಿದಾಗ ಅಲ್ಲಿಯೇ ಹೆಣವಾಗಿದ್ದರು.
ಸುಂದರ್ ಪಂಡಿತ್ ಬರೋಲಾದ ನಿವಾಸಿ. ಬೇರೆ ಕಡೆಯಲ್ಲಿ ಕೆಲಸಕ್ಕೆ ಇದ್ದ ಅವರು ಸಾಮಾನ್ಯವಾಗಿ ವಾರಾಂತ್ಯದಲ್ಲಿ ಮನೆಗೆ ಹೋಗುತ್ತಿದ್ದರು. ಮೊನ್ನೆ ಭಾನುವಾರ ಕೂಡ ಮನೆಗೆ ಹೋಗಿದ್ದಾರೆ. ಆದರೆ ಸದಾ ಮದ್ಯಪಾನ ಮಾಡುತ್ತಿದ್ದ ಅವರು, ಅಂದು ಕೂಡ ಕುಡಿದುಕೊಂಡೇ ಮನೆಗೆ ಹೋಗಿದ್ದಾರೆ.
ಬೇಸ್‌ಮೆಂಟ್ ಅಲ್ಲಿ ಕಾರು ಪಾರ್ಕ್ ಮಾಡುವಷ್ಟರಲ್ಲಿ ನಿದ್ದೆ ಬಂದಿದೆ. ಎ.ಸಿ. ಆನ್ ಇತ್ತು. ಹಾಗೆಯಾ ನಿದ್ದೆಗೆ ಜಾರಿಬಿಟ್ಟಿದ್ದಾರೆ. ಮರುದಿನ ಬೆಳಗ್ಗೆ ಬೇಸ್‌ಮೆಂಟ್‌ಲ್ಲಿ ಕಾರು ಇದ್ದಿದ್ದನ್ನು ಗಮನಿಸಿದ ಅವರ ಸಹೋದರ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಲ್ಲಿಯವರೆಗೆ ಅವರು ಮೃತಪಟ್ಟಿದ್ದರು.
ಎಲ್ಲ ಕಿಟಿಕಿಗಳು ಬಂದ್ ಇದ್ದು, ಎ.ಸಿ ಆನ್ ಇದ್ದ ಕಾರಣ, ಕಾರ್ಬನ್ ಮೊನಾಕ್ಸೈಡ್ ಹೆಚ್ಚಾಗಿ ಪಸರಿಸಿದೆ. ಈ ವಿಷ ಅನಿಲವನ್ನು ಸೇವಿಸಿರುವ ಕಾರಣ ಸಾವಿಗೀಡಾಗಿರುವುದಾಗಿ ವೈದ್ಯರು ಹೇಳಿದ್ದಾರೆ.ಬಳಿಕ ಕುಟುಂಬದವರು ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ,ಕುಟುಂಬದವರು ಯಾವುದೇ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.