ಡ್ರಗ್ಸ್ ಪ್ರಕರಣ : ಕಿಶೋರ್ ಶೆಟ್ಟಿ ಗೆಳತಿ ಆಸ್ಕಾಗೆ ಜಾಮೀನು – ಸಿಸಿಬಿ ಪೊಲೀಸರ ಡ್ರಗ್ಸ್ ತನಿಖೆ ಹಳ್ಳ ಹಿಡಿಯೋದು ಖಚಿತ-ಕಹಳೆ ನ್ಯೂಸ್
ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಡ್ರಗ್ಸ್ ದಂಧೆ ಪ್ರಕರಣ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಈಗಾಗಲೇ ನಿರೂಪಕಿ ಅನುಶ್ರೀಯವರಿಗೆ ಪೊಲೀಸರು ಕ್ಲೀನ್ ಚಿಟ್ ಕೊಡಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಕಿಶೋರ್ ಶೆಟ್ಟಿ ಗೆಳತಿ ನಾಗಾಲ್ಯಾಂಡ್ ಮೂಲದ ಆಸ್ಕಾಗೆ ಜಾಮೀನು ಮಂಜೂರಾಗಿದೆ. ಇದು ಅನುಶ್ರೀ ಕ್ಲೀನ್ ಚಿಟ್ ಪ್ರಕ್ರಿಯೆಗೆ ಸುಲಭವಾಗಲಿದೆ.
ವಿಚಾರಣೆ ಸಂದರ್ಭದಲ್ಲಿ ಅನುಶ್ರೀ ನನ್ನ ಫ್ಲ್ಯಾಟ್ಗೆ ಬರುತ್ತಿದ್ದಳು ಎಂದು ಆಸ್ಕಾ ಬಾಯಿ ಬಿಟ್ಟಿದ್ದಳಂತೆ. ಜೊತೆಗೆ ಬಂಧನವಾದ ವೇಳೆ ಆಸ್ಕಾ ಡ್ಕಗ್ಸ್ ನಶೆಯ ಮತ್ತಿನಲ್ಲಿದ್ದರು. ನಶೆಯ ಇಳಿದ ಬಳಿಕವೇ ಪೊಲೀಸರು ವಿಚಾರಣೆ ನಡೆಸಿದ್ದರು.
ಮಂಂಗಳೂರು ಪೊಲೀಸರ ಡ್ರಗ್ಸ್ ದಂಧೆ ತನಿಖೆ ಹಾಗೂ ನ್ಯಾಯಾಲಯದ ಬೆಳವಣಿಗೆಗಳನ್ನು ಗಮನಿಸಿದರೆ, ಈ ಪ್ರಕರಣದ ಕಡತ ಶೀಘ್ರದಲ್ಲೇ ಮುಚ್ಚಿ ಹೋಗುವ ಲಕ್ಷಣಗಳಿದೆ. ಯಾಕಂದ್ರೆ ಈ ಪ್ರಕರಣದಲ್ಲಿ ಮಾಜಿ ಸಿಎಂ, ಸಂಸದ, ಮಾಜಿ ಸಿಎಂ ಪುತ್ರ, ಶಾಸಕರ ಹೆಸರುಗಳು ಕೇಳಿ ಬಂದಿತ್ತು.