ಉಡುಪಿ : ದೇಶದ ಗಣ್ಯಾತೀಗಣ್ಯರು ಉಡುಪಿ ಜಿಲ್ಲೆಗೆ ಆಗಮಿಸಿದರೆ ಇಲ್ಲಿನ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವುದು ಸಾಮಾನ್ಯ. ಆದ್ರೆ ಮಾರ್ಚ್ 20 ರ ಮಂಗಳವಾರ ಉಡುಪಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ಕೃಷ್ಣ ಮಠದಿಂದ ದೂರ ಉಳಿಯಲು ನಿರ್ಧರಿಸಿದ್ದು, ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಎರಡು ಸುತ್ತು ಪ್ರವಾಸ ಮುಗಿಸಿರುವ ರಾಹುಲ್ ಗಾಂಧಿ ಆ ಸಂದರ್ಭದಲ್ಲಿ ಹಲವು ಮಠ,ಮಂದಿರ, ಮಸೀದಿ ಗಳಿಗೆ ಭೇಟಿ ನೀಡಿದ್ದರು. ಆದರೆ ಇದೀಗ 3 ನೇ ಸುತ್ತಿನ ರಾಜ್ಯ ಪ್ರವಾಸದಲ್ಲಿ ಉಡುಪಿಗೆ ಹೋದರೂ ಕೃಷ್ಣ ಮಠದಿಂದ ದೂರ ಉಳಿಯಲು ನಿರ್ಧರಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಕೇವಲ ಸಿಎಂ ಸಿದ್ದರಾಮಯ್ಯ ಅವರಿಗೆ ಮುಜುಗರವಾಗುವುದನ್ನು ತಪ್ಪಿಸಲೆಂದು ರಾಹುಲ್ ಗಾಂಧಿ ಅವರ ಪ್ರವಾಸದ ಕಾರ್ಯಕ್ರಮ ರೂಪಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಐದು ವರ್ಷಗಳ ಅವಧಿಯಲ್ಲಿ 6 ಬಾರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಉಡುಪಿಗೆ ಭೇಟಿ ನೀಡಿದರೂ ಒಮ್ಮೆಯೂ ಕೃಷ್ಣ ಮಠಕ್ಕೆ ನೀಡಿರಲಿಲ್ಲ. ಪರ್ಯಾಯ ಸಂದರ್ಭದಲ್ಲಿ ಶ್ರೀಗಳು ಆಹ್ವಾನ ನೀಡದಿದ್ದರೂ ಭೇಟಿ ನೀಡರಲಿಲ್ಲ. ಹೀಗಾಗಿಯೇ ಕುದ್ರೋಳಿ ದೇವಾಲಾಯ, ಮಾ ೨೧ ರಂದು ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ಮಾಡಲಿರುವ ರಾಹುಲ್ ಉಡುಪಿ ಕೃಷ್ಣ ಮಠದಿಂದ ಮಾತ್ರ ದೂರ ಉಳಿಯಲಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.