ಮೇ ತಿಂಗಳಿಂದ ಭಾರತ-ಚೀನಾ ನಡುವೆ ಸಂಬಂಧ ಹದಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾವಲಂಭಿ ಭಾರತದ ಘೋಷಣೆ ಮಾಡಿದ್ದಾರೆ. ಇದಾದ್ಮೇಲೆ ಭಾರತದಲ್ಲಿ ಚೀನಾ ವಸ್ತುಗಳ ಬಳಕೆ ಕಡಿಮೆಯಾಗಿದೆ.
ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಅಲಂಕಾರಿಕ ವಸ್ತುಗಳು ಚೀನಾದಿಂದ ಬರ್ತಿದ್ದವು. ಆದ್ರೆ ಈ ಬಾರಿ ಮನೆಗಳಲ್ಲಿ ಭಾರತೀಯರ ಕೈನಿಂದ ಸಿದ್ಧವಾದ ಅಲಂಕಾರಿಕ ವಸ್ತುಗಳು ರಾರಾಜಿಸಲಿವೆ.
ನಾಲ್ಕು ರಾಜ್ಯಗಳಲ್ಲಿ ಅಲಂಕಾರಿಕ ವಸ್ತುಗಳ ತಯಾರಿ 2 ತಿಂಗಳುಗಳಿಂದಲೇ ಶುರುವಾಗಿದೆ. ಇಂಡಿಯನ್ ಬಜಾರ್ ಹೆಸರಿನ ಸಂಸ್ಥೆ ಚೀನಾಕ್ಕೆ ಉತ್ತರ ನೀಡಲು ಸಿದ್ಧವಾಗಿದೆ. ಮಹಾರಾಷ್ಟ್ರ, ಬಿಹಾರ, ಯುಪಿ ಮತ್ತು ಜಾರ್ಖಂಡ್‌ನ ಮಹಿಳಾ ಗುಂಪುಗಳು ದೀಪಾವಳಿಗೆ ಸರಕುಗಳನ್ನು ತಯಾರಿಸುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ 4 ರಾಜ್ಯಗಳಿಂದ ಶೇಕಡಾ 40 ರಷ್ಟು ಅಲಂಕಾರಿಕ ವಸ್ತುಗಳ ಬೇಡಿಕೆ ಈಡೇರುವ ನಿರೀಕ್ಷೆಯಿದೆ. ಸರಕುಗಳ ಸರಬರಾಜು ಕೂಡ ಪ್ರಾರಂಭವಾಗಿದೆ. ವಿದೇಶದಲ್ಲಿ ವಾಸಿಸುವ ಭಾರತೀಯ ಕುಟುಂಬಗಳು ದೀಪಾವಳಿಯಲ್ಲಿ ಬಳಸುವ ಸರಕುಗಳನ್ನು ಭಾರತದಿಂದಲೇ ಖರೀದಿಸುತ್ತಿದ್ದಾರೆ.
ಲಕ್ಷ್ಮಿ ಪೂಜೆಗೆ ಬಳಸುವ ವಸ್ತುಗಳಿಂದ ಹಿಡಿದು, ದೀಪದವರೆಗೆ ಎಲ್ಲವೂ ಇಲ್ಲಿ ಲಭ್ಯವಿದೆ. ವಸ್ತುಗಳ ಗುಣಮಟ್ಟದ ಮೇಲೆ ಬೆಲೆ ನಿಗದಿಯಾಗುತ್ತದೆ. ದೀಪಾವಳಿಗೆ ದೇಸಿ ವಸ್ತುಗಳನ್ನು ಬಳಸಲು ಅಥವಾ ಮಾರಾಟ ಮಾಡಲು ಬಯಸುವವರು 8800449679 ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.