Saturday, November 23, 2024
ಹೆಚ್ಚಿನ ಸುದ್ದಿ

ಕೇವಲ ‘ಎರಡು ವಾರದ ಮಗು’ವಿನೊಂದಿಗೆ ‘ಕೊರೋನಾ ಕರ್ತವ್ಯ’ಕ್ಕೆ ಹಾಜರಾದ ‘ಐಎಎಸ್ ಅಧಿಕಾರಿ’-ಕಹಳೆ ನ್ಯೂಸ್

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡೋ ಮಹಿಳಾ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ನೀಡಲಾಗುತ್ತೆ. ಆದರೆ ಉತ್ತರ ಪ್ರದೇಶದ ಸರ್ಕಾರಿ ಮಹಿಳಾ ಅಧಿಕಾರಿ ಮಾತ್ರ ಹೆರಿಗೆಯಾದ ಮೂರೇ ವಾರದಲ್ಲಿ ಕಚೇರಿಗೆ ಹಾಜರಾಗಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂರು ವಾರದ ಮಗುವನ್ನ ಕಚೇರಿಗೆ ಕರೆದುಕೊಂಡು ಬರುವ ಮಹಿಳಾ ಉಪವಿಭಾಗದ ಮ್ಯಾಜಿಸ್ಟ್ರೇಟ್ ಸೌಮ್ಯ ಪಾಂಡೆ​​ ಕಚೇರಿ ಕೆಲಸದ ಜೊತೆ ಜೊತೆಯೇ ಮಗುವಿನ ಆರೈಕೆಯನ್ನೂ ಮಾಡುತ್ತಿದ್ದಾರೆ. ​​

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತರ ಪ್ರದೇಶದ ಮೋದಿ ನಗರದಲ್ಲಿರುವ ಸರ್ಕಾರಿ ಕಚೇರಿಯಲ್ಲಿ ಮಗುವನ್ನ ಆರೈಕೆ ಮಾಡ್ತಾ ಕರ್ತವ್ಯ ನಿರ್ವಹಿಸ್ತಾ ಇರೋ ಸೌಮ್ಯಾ ಪಾಂಡೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಾಕಷ್ಟು ಮಂದಿ ಸೌಮ್ಯ ಪಾಂಡೆ ಕೆಲಸಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಸೆಲ್ಯೂಟ್​ ಹೊಡೆದಿದ್ರೆ, ಇನ್ನು ಕೆಲವರು ಕೋವಿಡ್​ ನಂತಹ ಕಠಿಣ ಸಂದರ್ಭದಲ್ಲಿ ಇಂತಹ ನಿರ್ಧಾರ ಬೇಕಿತ್ತಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ .
2018ರಲ್ಲಿ ನ್ಯೂಝಿಲೆಂಡ್​ ಪ್ರಧಾನಿ ಜಸಿಂಡಾ ಅರ್ಡೆರ್ನ್ ತಮ್ಮ ಮೂರು ತಿಂಗ ಮಗುವನ್ನ ಅಸೆಂಬ್ಲಿಗೆ ಕರೆತರುವ ಮೂಲಕ ದಾಖಲೆ ಬರೆದಿದ್ದರು.