Recent Posts

Monday, January 20, 2025
ಹೆಚ್ಚಿನ ಸುದ್ದಿ

ಕೊರೋನಾ ಲಸಿಕೆ ಅಲ್ಲ.. ವೈರಾಣುವನ್ನೇ ದೇಹಕ್ಕೆ ಸೇರಿಸುವ ಪ್ರಯೋಗ..!-ಕಹಳೆ ನ್ಯೂಸ್

ಇಡೀ ಜಗತ್ತನ್ನು ಅಲ್ಲಾಡಿಸಿರುವ ಕೊರೋನಾ ಹಾವಳಿ ಯಾವಾಗ ಮುಗಿಯುತ್ತೆ ಅಂತ ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಆದ್ರೆ ಕೊರೋನಾಗೆ ಸಂಬಂಧಿಸಿದಂತೆ ಇದುವರೆಗೆ ಮಾಡಿದ ಊಹೆಗಳೆಲ್ಲವೂ ಹುಸಿಯಾಗಿದೆ. ಒಂದನೇ ಅಲೆ ಬರುತ್ತೆ, ಎರಡನೇ ಅಲೆ ಬರುತ್ತೆ, ಆಮೇಲೆ ಕೊರೋನಾ ಹಾವಳಿ ನಿಲ್ಲುತ್ತೆ ಅಂತೆಲ್ಲಾ ಅಂದಾಜಿಸಲಾಗಿತ್ತು. ಆದ್ರೀಗ ಯಾವ ಅಲೆಯೂ ಇಲ್ಲದಂತೆ ಈ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಹೀಗಾಗಿ ಬ್ರಿಟನ್​ನಲ್ಲಿ ವಿಜ್ಞಾನಿಗಳು ಕೊರೋನಾ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುವ ಉದ್ದೇಶದಿಂದ ಹೊಸ ಪ್ರಯತ್ನಕ್ಕೆ ಕೈ ಹಾಕುವ ಲಕ್ಷಣ ಕಾಣ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅಧ್ಯಯನ ಸ್ವಲ್ಪ ವಿಚಿತ್ರವಾಗಿದೆ. ಯಾಕಂದ್ರೆ ಆರೋಗ್ಯವಂತರ ದೇಹಕ್ಕೆ ಕೊರೋನಾ ವೈರಾಣು ತಗುಲಿಸಿ ಅಧ್ಯಯನ ನಡೆಸೋದು ಇದರ ಉದ್ದೇಶ. ಹೀಗೆ ಮಾಡುವುದರಿಂದ ಕೊರೋನಾ ಮತ್ತು ಅದಕ್ಕೆ ಲಸಿಕೆ ಕಂಡುಹಿಡಿಯಲು ಸಂಶೋಧಕರಿಗೆ ಮತ್ತಷ್ಟು ಸಹಕಾರಿಯಾಗಲಿದೆ ಅನ್ನೋ ಚರ್ಚೆಗಳು ನಡೆಯುತ್ತಿವೆ. ಮತ್ತೊಂದು ವಿಚಾರ ಅಂದ್ರೆ ಕೊರೋನಾ ವೈರಾಣು ತಗುಲಿಸಿಕೊಳ್ಳಲು ಸ್ವಯಂಸೇವಕರು ಕೂಡ ಮುಂದಾಗಿದ್ದಾರೆ. ‘ನಮಗೆ ಗೊತ್ತಿಲ್ಲದೆ ಕೊರೋನಾ ಸೋಂಕು ತಗುಲುವುದಕ್ಕಿಂತ ನಾವೇ ವೈರಾಣು ತಗುಲಿಸಿಕೊಳ್ಳುವುದು ಉತ್ತಮ’ ಅಂತ ಪ್ರಯೋಗದಲ್ಲಿ ಭಾಗಿಯಾಗಲು ಸಿದ್ಧವಾಗಿರುವ ವ್ಯಕ್ತಿಯೊಬ್ಬ ಹೇಳಿದ್ದಾನೆ. ಅಂದ್ಹಾಗೆ ಸ್ವಯಂ ಸೇವಕರ ಮೂಗಿನ ಮೂಲಕ ಅವರ ದೇಹಕ್ಕೆ ವೈರಾಣು ಸೇರಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೋನಾ ವೈರಾಣು ಯಾರನ್ನೂ ಬಿಡುತ್ತಿಲ್ಲ. ಮಕ್ಕಳು, ಯುವಕರು, ವೃದ್ಧರು ಎಲ್ಲರಿಗೂ ದೃಢಪಡುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯವಂತರಿಗೆ ಸೋಂಕು ತಗುಲಿಸಿ ಪ್ರಯೋಗ ನಡೆಸೋದು ಎಷ್ಟು ಸರಿ ಅನ್ನೋ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೊರೋನಾ ಲಸಿಕೆ ಪ್ರಯೋಗದಲ್ಲಿ ಭಾಗಿಯಾಗೋದು ಬೇರೆ, ಕೊರೋನಾವನ್ನೇ ದೇಹಕ್ಕೆ ಸೇರಿಸಿಕೊಳ್ಳುವ ಪ್ರಯೋಗದಲ್ಲಿ ಭಾಗಿಯಾಗೋದು ಬೇರೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಸಾಕಷ್ಟು ಅಧ್ಯಯನ ನಡೆಸಿದ ಬಳಿಕವೇ ಲಸಿಕೆಯ ಮಾನವ ಪ್ರಯೋಗ ನಡೆಸಲಾಗುತ್ತದೆ. ಹೀಗಾಗಿ ಲಸಿಕೆಯ ಪ್ರಯೋಗಕ್ಕೆ ಒಳಗಾದ ಸ್ವಯಂಸೇವಕರಲ್ಲಿ ಅಡ್ಡ ಪರಿಣಾಮಗಳು ಕಂಡುಬರುವ ಸಾಧ್ಯತೆ ತುಂಬಾ ಕಡಿಮೆ. ಆದ್ರೆ ವೈರಾಣುವಿನ ಪ್ರಯೋಗಕ್ಕೆ ಒಳಗಾದ್ರೆ ಅಪಾಯವನ್ನು ಎದುರಿಸಬೇಕಾಗುತ್ತದೆ.