Saturday, November 23, 2024
ಹೆಚ್ಚಿನ ಸುದ್ದಿ

ಸಗಣಿಯಿಂದ ತಯಾರಿಸಲಾದ ಈ ಚಿಪ್ ಮೊಬೈಲ್ ರೇಡಿಯೇಷನ್ ತಡೆದು, ಕಾಯಿಲೆ ದೂರ ಮಾಡುತ್ತಂತೆ-ಕಹಳೆ ನ್ಯೂಸ್

 ಸ್ಮಾರ್ಟ್​ಫೋನ್​ನಲ್ಲಿ ಬಳಕೆಯಾಗುವ ಚಿಪ್​ ಆರೋಗ್ಯದ ಮೇಲೆ ಎಷ್ಟೊಂದು ಅಪಾಯ ಬೀರುತ್ತದೆ ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಷಯವೇ. ಇದರಿಂದ ಹೊರಸೂಸುವ ವಿಕಿರಣ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತದೆ. ಆದರೆ ಚಿಪ್​ ಇಲ್ಲದೇ ಜೀವನ ಇಲ್ಲ ಎನ್ನುವ ಪರಿಸ್ಥಿತಿ ತಲೆದೋರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ಪರಿಹಾರೋಪಾಯವಾಗಿ ವಿಕಿರಣ ಕಡಿಮೆ ಮಾಡಬಲ್ಲ ಚಿಪ್‌ ಒಂದನ್ನು ರಾಷ್ಟ್ರೀಯ ಕಾಮಧೇನು ಆಯೋಗ ಬಿಡುಗಡೆ ಮಾಡಿದೆ. ದೇಶದಾದ್ಯಂತ ಕಾಮಧೇನು ದೀಪಾವಳಿ ಅಭಿಯಾನವನ್ನು ಆಯೋಗ ಹಮ್ಮಿಕೊಂಡಿದೆ. ಹಸುವಿನ ಸೆಗಣಿಯಿಂದ ಮಾಡಿದ ಉತ್ಪನ್ನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಈ ಅಭಿಯಾನದ ಆಶಯವಾಗಿದೆ.ರಾಷ್ಟ್ರೀಯ ಕಾಮಧೇನು ಆಯೋಗವು ಸೋಮವಾರದಿಂದಲೇ ದೇಶದಾದ್ಯಂತ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವ ಕುರಿತು ಜಾಗೃತಿ ಮೂಡಿಸಲು ಆರಂಭಿಸಿದೆ. ಇದರ ಅಂಗವಾಗಿ ಇದೀಗ ಚಿಪ್​ ಬಿಡುಗಡೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಕಾಮಧೇನು ಸಂಘದ ಅಧ್ಯಕ್ಷ ವಲ್ಲಭಭಾಯಿ ಕಠಾರಿಯಾ ಅವರು ಹಸುವಿನ ಸಗಣಿಯಿಂದ ತಯಾರಿಸಿದ ಚಿಪ್ ಅನ್ನು ಅನಾವರಣಗೊಳಿಸಿದ್ದು, ಮೊಬೈಲ್ ಹ್ಯಾಂಡ್ ಸೆಟ್​ಗಳಿಂದ ಬರುವ ವಿಕಿರಣವನ್ನು ಇದು ಕಡಿಮೆ ಮಾಡುತ್ತದೆ ಮತ್ತು ಇದು ರೋಗಗಳ ವಿರುದ್ಧ ರಕ್ಷಣೆಯನ್ನು ನೀಡಲಿದೆ ಎಂದು ಹೇಳಿದ್ದಾರೆ.

ಸೆಗಣಿಯಿಂದ ಮೊಬೈಲ್ ರೇಡಿಯೇಷನ್ ಕಡಿಮೆ ಮಾಡಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದು ವಿಕರಣ ಚಿಪ್ ಆಗಿದ್ದು, ಇದರಿಂದ ಹಲವು ರೋಗಗಳನ್ನು ತಡೆಯುವ ಶಕ್ತಿಯೂ ಇದೆ ಎಂದು ಅವರು ಮಾಹಿತಿ ನೀಡಿದರು.

ಈ ಚಿಪ್ಪನ್ನು ‘ಗೌಸತ್ವ ಕವಚ್‌’ ಎಂದು ಕರೆಯಲಾಗುತ್ತದೆ. ರಾಜ್‌ಕೋಟ್ ಮೂಲದ ಶ್ರೀ ಜಿ ಗೋಶಾಲಾ ಇದನ್ನು ತಯಾರಿಸಿದೆ. 2019ರಲ್ಲಿ ಸ್ಥಾಪನೆಯಾಗಿರುವ ಆರ್‌ಕೆಎ ಹಸುಗಳ ಸಂರಕ್ಷಣೆ, ಹಾಗೂ ಅಭಿವೃದ್ಧಿ, ಅವುಗಳ ಸಂತತಿ ಅಭಿವೃದ್ಧಿಪಡಿಸುವುದನ್ನು ಗುರಿಯಾಗಿಸಿಕೊಂಡಿದೆ. ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯದ ವ್ಯಾಪ್ತಿಗೆ ಬರುವ ಆಯೋಗ ಹಬ್ಬದ ಸಮಯದಲ್ಲಿ ಗೋವು ಆಧಾರಿತ ಉತ್ಪನ್ನಗಳನ್ನು ಬಳಸುವುದನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ಅಭಿಯಾನರನ್ನು ಆರಂಭಿಸಿದೆ.