ಪುತ್ತೂರಿನಲ್ಲಿ ರಸ್ತೆ ಅಪಘಾತಕ್ಕೊಳಗಾದ ವಿಟ್ಲದ ಮಹಮ್ಮದ್ ಫಯಾಝ್ ನನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಪುತ್ತೂರು ಬಿಜೆಪಿ ನಾಯಕರು – ಕಹಳೆ ನ್ಯೂಸ್
ಪುತ್ತೂರು : ನಗರದ ಹಳೇ ಬಸ್ಸು ನಿಲ್ದಾಣದ ನಾಗನಕಟ್ಟೆ ಬಳಿ ರಾತ್ರಿ ಸುಮಾರು 9.00 ಗಂಟೆ ಸಮಯಕ್ಕೆ ರಸ್ತೆ ಅಪಘಾತ ಒಂದು ಸಂಭವಿಸಿದ್ದು, ವಿಟ್ಲದ ಮಹಮ್ಮದ್ ಫಯಾಝ್ ತನ್ನ ಆಕ್ಟಿವಾದಿಂದ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದ, ತಕ್ಷಣ ಅದೇ ಮಾರ್ಗವಾಗಿ ತೆರಳುತ್ತಿದ್ದ, ಪುತ್ತೂರಿನ ಬಿಜೆಪಿ ನಾಯಕರು ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಪುತ್ತೂರು ಬಿಜೆಪಿ ನಗರದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಯುವ ಮೋರ್ಛಾ ಮುಖಂಡರಾದ ಕಿರಣ್ ಶಂಕರ ಮಲ್ಯ, ಸಚಿನ್ ಶೆಣೈ, ಸಚಿನ್ ಆಚಾರ್ಯ, ಸಂಪತ್ತ್ ಹಾಗೂ ಸ್ಥಳೀಯರಾದ ಮಂಜುನಾಥ ಬಂಡಾರ್ಕರ್ ಜೊತೆಯಾಗಿ ಯುವಕನ ರಕ್ಷಣೆ ಮಾಡಿ ಚಿಕಿತ್ಸೆ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ.