ಶಿವಮೊಗ್ಗ: ಅಡಕೆ ಬೆಳೆಗಾರರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಹೌದು, ಈ ಹಿಂದೆ ಟೀ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಮಂಡಗದ್ದೆಯ ಯುವ ಉದ್ಯಮಿ ನೆಂಪೆ ನಿವೇದನ್, ಇದೀಗ ಅಡಕೆ ಶಾಂಪೂ ಸಂಶೋಧಿಸಿದ್ದಾರೆ. ಇದು ಅಡಿಕೆ ಬೆಳಗಾರರಲ್ಲಿ ಹೊಸ ಬೆಳಕು ಮೂಡಿಸಿದ್ದು, ಅಡಿಕೆಯ ಬೆಲೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.
ಯುವ ಸಂಶೋಧಕ ನಿವೇದನ್, ಚಾಲಿ ಅಡಕೆಯಲ್ಲಿ ಪ್ರೊಲೀನ್ ಎಂಬ ಆಂಟಿ ಏಜೆಂಗ್ ಇದ್ದು, ಇದು ದೇಹದಲ್ಲಿನ ಸುಕ್ಕನ್ನು ಕಡಿಮೆ ಮಾಡುತ್ತದೆ. ಗ್ಯಾಲಿಕ್ ಆಯಸಿಡ್ ಎಂಬ ಆಯಂಟಿ ಫಂಗಲ್ ಇದ್ದು, ಇದು ಜೆಮ್‌ರ್‍ಗಳನ್ನ ಸಾಯಿಸುತ್ತದೆ. ಈ ಅಂಶಗಳನ್ನ ಅಡಕೆಯಿಂದ ಪ್ರತ್ಯೇಕಿಸಿ ಈ ಶಾಂಪೂ ತಯಾರಿಸಲಾಗುತ್ತದೆ ಎಂದಿದ್ದಾರೆ.
ಇನ್ನು ರಾಜ್ಯದಲ್ಲಿಯೂ ಗುಟ್ಕಾ ನಿಷೇಧದ ಭೀತಿ ಎದುರಿಸುತ್ತಿರುವ ಬೆನ್ನೆಲ್ಲೇ ಅಡಕೆ ಶಾಂಪೂ ಸ್ಯಾಚೆಟ್ ತಯಾರಾಗುತ್ತಿರುವುದು ಸಂತಸದ ಸಂಗತಿಯೇ ಸರಿ.