Recent Posts

Monday, January 20, 2025
ಹೆಚ್ಚಿನ ಸುದ್ದಿ

ಮಾಜಿ ಸಚಿವ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್-ಕಹಳೆ ನ್ಯೂಸ್

ಲಖನೌ: ಬಿಜೆಪಿ ಮುಖಂಡ, ಮಾಜಿ ಸಚಿವ ಚಿನ್ಮಯಾನಂದ ವಿರುದ್ಧ ಕಳೆದ ವರ್ಷ ಅತ್ಯಾಚಾರದ ಆರೋಪ ಹೊರಿಸಿದ್ದ ಕಾನೂನು ಪದವಿ ವಿದ್ಯಾರ್ಥಿನಿಯೊಬ್ಬಳು ಇದೀಗ ತನ್ನ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎನ್ನುವ ಮೂಲಕ ಕೋರ್ಟ್​ನಲ್ಲಿ ವಕೀಲರನ್ನೇ ಅಚ್ಚರಿಗೆ ತಳ್ಳಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

23 ವರ್ಷ ವಯಸ್ಸಿನ ಸ್ನಾತಕೋತ್ತರ ಕಾನೂನು ಪದವಿಧರೆಯಾಗಿರುವ ವಿದ್ಯಾರ್ಥಿನಿ ಇದೀಗ ಲಖನೌದ ಕೋರ್ಟ್​ನಲ್ಲಿ ವ್ಯತಿರಿಕ್ತ ಸಾಕ್ಷಿ ನುಡಿದಿದ್ದಾಳೆ. ನಿನ್ನೆ ಕೋರ್ಟ್​ಗೆ ಹಾಜರಾಗಿದ್ದ ಈಕೆ, ಸರ್ಕಾರಿ ವಕೀಲರು ಹೇಳುತ್ತಿರುವಂತೆ ಏನೂ ನಡೆದಿಲ್ಲ. ನಾನು ಅವರ ವಿರುದ್ಧ ಆರೋಪಗಳನ್ನು ಮಾಡಿಲ್ಲ ಎಂದು ಹೇಳಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವಿದ್ಯಾರ್ಥಿನಿ, ತಾನು ನಿಮ್ಮ ಮೇಲೆ ಅತ್ಯಾಚಾರದ ಕೇಸ್​ ಹಾಕಿದ್ದೇನೆ. ಅದನ್ನು ವಾಪಸ್​ ಪಡೆಯಬೇಕೆಂದರೆ ಐದು ಕೋಟಿ ರೂಪಾಯಿ ನೀಡಿ ಎಂದು ಬೇಡಿಕೆ ಒಡ್ಡಿದ್ದಳು ಎಂಬ ಆರೋಪ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳ ಅಧಿಕಾರಿಗಳು ಸುಲಿಗೆ ಪ್ರಕರಣದಲ್ಲಿ ವಿದ್ಯಾರ್ಥಿನಿಯನ್ನು ಬಂಧಿಸಿದ್ದರು.

ಆದರೆ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಚಿನ್ಮಯಾನಂದ ಅವರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ನಂತರ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ.
ಇದೀಗ ಕೋರ್ಟ್​ನಲ್ಲಿ ಅತ್ಯಾಚಾರ ನಡೆದೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ದಿಢೀರ್ ಬೆಳವಣಿಗೆಯಿಂದ ವಿಚಲಿತರಾದ ಸರ್ಕಾರಿ ವಕೀಲರು ಐಪಿಸಿಯ ಸೆಕ್ಷನ್ 340ರ ಅನ್ವಯ ಸುಳ್ಳುಸಾಕ್ಷಿಗಾಗಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೂಡಲೇ ಅರ್ಜಿ ಸಲ್ಲಿಸಿದರು.

ಈ ಅರ್ಜಿಯನ್ನು ದಾಖಲಿಸಿಕೊಳ್ಳುವಂತೆ ನ್ಯಾಯಾಧೀಶ ಪಿ.ಕೆ.ರಾಯ್ ತಮ್ಮ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂಬಂಧ ಅರ್ಜಿಯ ಪ್ರತಿಯನ್ನು ಮಹಿಳೆಗೆ ನೀಡುವಂತೆಯೂ ಆದೇಶಿಸಿದರು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 15ರಂದು ನಡೆಯಲಿದೆ. ಶಹಜಹಾನ್‌ಪುರದಲ್ಲಿ ಚಿನ್ಮಯಾನಂದ ಅವರ ಆಶ್ರಯ ನಡೆಸುತ್ತಿದ್ದ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದ ಮಹಿಳೆ, ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿರುವ ಪ್ರಕರಣ ಇದಾಗಿದೆ. ಈ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು.

ಈ ಹಿಂದೆ ವಿದ್ಯಾರ್ಥಿನಿಯನ್ನು ಬಂಧಿಸುವ ಸಮಯದಲ್ಲಿ, ಅತ್ಯಂತ ಕ್ರೂರವಾಗಿ ನಡೆದುಕೊಂಡರು ಎಂದು ಕುಟುಂಬಸ್ಥರು ಆರೋಪಿಸಿದ್ದರು. ಬಂಧನದ ವೇಳೆ ಅಧಿಕಾರಿಗಳು ಕ್ರೂರವಾಗಿ ನಡೆದುಕೊಂಡರು. ಆಕೆಯನ್ನು ಅಮಾನವೀಯವಾಗಿ ಥಳಿಸಿ ತಡೆಯಲು ಹೋದ ನಮ್ಮ ಮೇಲೂ ಹಲ್ಲೆ ಮಾಡಿದರು. ಮನೆಯಲ್ಲಿದ್ದ ಆಕೆಯನ್ನು ಅಧಿಕಾರಿಗಳು ಹೊರಗೆ ಎಳೆದುಕೊಂಡು ಬಂದರು. ಕನಿಷ್ಠ ಪಕ್ಷ ಆಕೆ ತನ್ನ ಚಪ್ಪಲಿ ಹಾಕಿಕೊಳ್ಳಲು ಕೂಡ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದರು. ಇದೀಗ ಸತ್ಯ ಯಾವುದು, ಸುಳ್ಳು ಯಾವುದು ಎನ್ನುವುದು ಬೆಳಕಿಗೆ ಬರಬೇಕಷ್ಟೇ.