Recent Posts

Monday, January 20, 2025
ಸುದ್ದಿ

PVC ʼಆಧಾರ್ʼ ಕಾರ್ಡ್ ವಿಶೇಷತೆಯೇನು.? ಪಡೆಯುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ವಿವರ-ಕಹಳೆ ನ್ಯೂಸ್

ಸರ್ಕಾರದ ಪ್ರತಿಯೊಂದು ಯೋಜನೆ ಲಾಭ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಸಿಮ್ ಕಾರ್ಡ್ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಾರ್ಡ್ ಬೇಕು. ಮಕ್ಕಳನ್ನು ಶಾಲೆಗೆ ಸೇರಿಸಲು ಕೂಡ ಆಧಾರ್ ಕಾರ್ಡ್ ಕೇಳಲಾಗುತ್ತದೆ. ಇನ್ಮುಂದೆ ಹೊಸ ರೂಪದಲ್ಲಿ ಆಧಾರ್ ಕಾರ್ಡ್ ನಿಮಗೆ ಸಿಗಲಿದೆ. ಯುಐಡಿಎಐ ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್ ನೀಡಲು ಅನುಮತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸ ಆಧಾರ್ ಕಾರ್ಡ್, ಎಟಿಎಂ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ನಂತೆಯೇ ಇರಲಿದೆ. ಇದನ್ನು ನಿಮ್ಮ ಪರ್ಸ್ ನಲ್ಲಿ ಆರಾಮವಾಗಿ ಇಟ್ಟುಕೊಳ್ಳಬಹುದಾಗಿದೆ. ಪಾಕೆಟ್ ಗಾತ್ರದ ಆಧಾರ್ ಕಾರ್ಡ್ ಮೊದಲೇ ಇದೆ. ಇದ್ರಲ್ಲಿ ಹೊಸದೇನಿದೆ ಎಂದು ನೀವು ಕೇಳಬಹುದು. ಹೊಸ ಪಿವಿಸಿ ಕಾರ್ಡ್‌ಗಳ ಮುದ್ರಣ ಮತ್ತು ಲ್ಯಾಮಿನೇಶನ್ ಗುಣಮಟ್ಟ ಉತ್ತಮವಾಗಿದೆ ಎಂದು ಯುಐಡಿಎಐ ಹೇಳಿದೆ. ಇದು ಹಲವು ವರ್ಷಗಳವರೆಗೆ ಹಾಳಾಗುವುದಿಲ್ಲ. ಹೊಸ ಪಿವಿಸಿ ಆಧಾರ್ ಕಾರ್ಡ್‌ನೊಂದಿಗೆ, ಕ್ಯೂಆರ್ ಕೋಡ್ ಮೂಲಕ ಕಾರ್ಡ್‌ನ ಸತ್ಯಾಸತ್ಯತೆಯನ್ನು ತಕ್ಷಣವೇ ಖಚಿತಪಡಿಸಲಾಗುತ್ತದೆ. ಮಳೆಯಲ್ಲಿ ಹಾಳಾಗಬಹುದು ಎಂಬ ಭಯವಿಲ್ಲ. ಎಲ್ಲಿ ಬೇಕಾದ್ರೂ ಆರಾಮವಾಗಿ ತೆಗೆದುಕೊಂಡು ಹೋಗಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸ ಆಧಾರ್ ಕಾರ್ಡ್ ಗಾಗಿ ನೀವು ಈಗ್ಲೇ ಆರ್ಡರ್ ಮಾಡಬಹುದು. ಇದು ಆಧುನೀಕ ಭದ್ರತೆಯನ್ನು ಹೊಂದಿದೆ. ಇದ್ರಲ್ಲಿ ಹೊಲೊಗ್ರಾಮ್, Guilloche ಪ್ಯಾಟರ್ನ್, ಘೋಸ್ಟ್ ಇಮೇಜ್ ಮತ್ತು ಮೈಕ್ರೊಟೆಕ್ಸ್ಟ್ ವೈಶಿಷ್ಟ್ಯಗಳನ್ನು ನೀಡಲಾಗಿದೆ ಎಂದು ಯುಐಡಿಎಐ ಹೇಳಿದೆ.

ಹೊಸ ಆಧಾರ್ ಕಾರ್ಡ್ ಪಡೆಯಲು ನೀವು 50 ರೂಪಾಯಿ ಪಾವತಿ ಮಾಡಬೇಕು. ಮೊದಲಿಗೆ ಯುಐಡಿಎಐ https://uidai.gov.in ನ ಅಧಿಕೃತ ವೆಬ್‌ಸೈಟ್ ತೆರೆಯಿರಿ. ನಂತರ ನನ್ನ ಆಧಾರ್ ವಿಭಾಗದಲ್ಲಿ ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಕ್ಲಿಕ್ ಮಾಡಿ. ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಕ್ಲಿಕ್ ಮಾಡಿದ ತಕ್ಷಣ,12-ಅಂಕಿಯ ಆಧಾರ್ ಸಂಖ್ಯೆ ಅಥವಾ 16-ಅಂಕಿಯ ವರ್ಚುವಲ್ ಐಡಿ ಅಥವಾ 28-ಅಂಕಿಯ ಇಐಡಿ ಈ ಮೂರರಲ್ಲಿ ಒಂದನ್ನು ನಮೂದಿಸಬೇಕಾಗುತ್ತದೆ.

ನಂತ್ರ ಭದ್ರತಾ ಕೋಡ್ ಅಥವಾ ಕ್ಯಾಪ್ಚಾ ಕೋಡ್ ನಮೂದಿಸಿ. ಇದಾದ್ಮೇಲೆ ಒಟಿಪಿ ಕ್ಲಿಕ್ ಮಾಡಿ.ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ. ಒಟಿಪಿ ಸಲ್ಲಿಸಿದ ನಂತರ, ಕೆಳಗೆ ತೋರಿಸಿರುವ ಸಬ್‌ಮಿಟ್ ಕ್ಲಿಕ್ ಮಾಡಿ. ಅದರ ನಂತರ ಪಿವಿಸಿ ಕಾರ್ಡ್‌ನ ಪೂರ್ವವೀಕ್ಷಣೆ ಪ್ರತಿ ಪರದೆಯ ಮೇಲೆ ಕಾಣಿಸುತ್ತದೆ. ಇದು ನಿಮ್ಮ ವಿವರಗಳನ್ನು ಹೊಂದಿರುತ್ತದೆ. ಅಂತಿಮವಾಗಿ ಪಾವತಿ ಆಯ್ಕೆ ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ, ನೀವು ಡಿಜಿಟಲ್ ಮಾಧ್ಯಮದ ಮೂಲಕ 50 ರೂಪಾಯಿಗಳನ್ನು ಪಾವತಿಸಬೇಕು. ಅದರ ನಂತರ ಆಧಾರ್ ಪಿವಿಸಿ ಕಾರ್ಡ್‌ಗೆ ಆದೇಶ ನೀಡಲಾಗುವುದು. ಕೆಲವು ದಿನಗಳ ನಂತರ, ಪಿವಿಸಿ ಆಧಾರ್ ಕಾರ್ಡ್ ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ಮನೆಗೆ ತಲುಪುತ್ತದೆ.