Sunday, January 19, 2025
ಹೆಚ್ಚಿನ ಸುದ್ದಿ

ತಮಿಳು ನಟ ಧನುಷ್, ಡಿಎಂಕೆ ಮುಖಂಡ ವಿಜಯಕಾಂತ್ ಮನೆಗಳಿಗೆ ಬಾಂಬ್ ಬೆದರಿಕೆ-ಕಹಳೆ ನ್ಯೂಸ್

ಚೆನ್ನೈ: ತಮಿಳು ನಟ ಧನುಷ್ ಮತ್ತು ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ ಅವರ ಮನೆಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಮಂಗಳವಾರ ಎರಡು ಹುಸಿ ಬಾಂಬ್ ಕರೆಗಳು ಬಂದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಾಮಧೇಯ ವ್ಯಕ್ತಿಗಳಿಂದ ಕರೆಗಳನ್ನು ಸ್ವೀಕರಿಸಿದ ನಂತರ ಪೊಲೀಸರು ಧನುಷ್ ಹಾಗೂ ವಿಜಯಕಾಂತ್ ಅವರುಗಳ ಮನೆಗಳಿಗೆ ಬಾಂಬ್ ಪತ್ತೆ ದಳಗಳನ್ನು ಕಳಿಸಿ ಪರಿಶೀಲಿಸಿದ್ದಾರೆ. ಆದರೆ ಅವೆರಡೂ ಕರೆಗಳು ಹಿಸಿ ಬಾಂಬ್ ಕರೆಗಳೆಂದು ತಿಳಿದುಬಂದಿದೆ. ಸಧ್ಯ ಈ ಕುರಿತಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವು ತಿಂಗಳುಗಳ ಹಿಂದೆ ನಟ ಸೂರ್ಯ ಅವರ ಕಚೇರಿಯಲ್ಲಿ ಬಾಂಬ್ ಇರಿಸಿದ್ದಾಗಿ ಇಂತಹುದೇ ಹುಸಿ ಕರೆ ಬಂದಿತ್ತು. ಈ ಬಾರಿ ಎರಡೂ ಕರೆಗಳನ್ನು ಒಬ್ಬನೇ ವ್ಯಕ್ತಿ ಮಾಡಿರುವುದಾಗಿ ತಿಳಿದುಬಂದಿದೆ. ಬಾಂಬ್ ಬೆದರಿಕೆ ಕರೆ ಮಾಡಿದ ಆರೋಪಿಯ ಪತ್ತೆಗೆ ಪೊಲೀಸರು ಈಗ ಪ್ರಯತ್ನಿಸುತ್ತಿದ್ದಾರೆ.