Sunday, January 19, 2025
ಕಡಬಸುದ್ದಿ

ಮಾನವೀಯತೆ ಮೆರೆದ ಪುತ್ತೂರಿನ ಪೊಲೀಸ್ ತಂಡಕ್ಕೆ ಎಲ್ಲೆಡೆ ಮೆಚ್ಚುಗೆ..! –ಕಹಳೆ ನ್ಯೂಸ್

ಕಡಬ: ಪಂಜದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರರನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿ ಹಲವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿಪರಿತವಾಗಿ ಮಳೆ ಸುರಿಯುತ್ತಿದ್ದ ವೇಳೆ ಪಂಜದ ಸಂತೆ ಮಾರುಕಟ್ಟೆ ಬಳಿ ಹೋಗುತ್ತಿದ್ದ ಬೈಕ್ ಸವರಿಬ್ಬರೂ ಸ್ಕಿಡ್ ಆಗಿ ಬಿದ್ದಿದ್ದು, ಈ ವೇಳೆ ಇದೇ ರಸ್ತೆಯಲ್ಲಿ ಬರುತ್ತಿದ್ದ ಪುತ್ತೂರಿನ ಐ.ಪಿ.ಎಸ್ ಲಖನ್ ಸಿಂಗ್ ಯಾದವ್, ಪೊಲೀಸ್ ಅಧಿಕಾರಿಗಳಾದ ಲಕ್ಷ್ಮೀಷ್, ವಿಶ್ವನಾಥ್ ಹಾಗೂ ಶರೀಫ್ ತಮ್ಮ ಪೊಲೀಸ್ ವಾಹನದಲ್ಲಿ ಗಾಯಾಳುಗಳನ್ನು ಕಡಬ ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿ, ನಂತರ ಮನೆಗೆ ಕಳುಹಿಸಲೂ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು