Sunday, January 19, 2025
ಪುತ್ತೂರುಸುದ್ದಿ

ಜಿಡಿಪಿಯನ್ನು ಹೆಚ್ಚಿಸಲು ಹೊಸ ಶಿಕ್ಷಣ ನೀತಿ ಸಹಕಾರಿಯಾಗಲಿದೆ- ಶ್ರೀಮತಿ ರೂಪಲೇಖ –ಕಹಳೆ ನ್ಯೂಸ್

ಪುತ್ತೂರು: ಹೊಸ ಶಿಕ್ಷಣ ನೀತಿಯು ಕೌಶಲ್ಯ ವೃತ್ತಿಗೆ ಒತ್ತು ನೀಡುವುದರಿಂದ ಉದ್ಯೋಗವಕಾಶವನ್ನು ವಿಫುಲವಾಗಿ ನೀಡಬಹುದು .ಈ ರೀತಿಯ ಬೆಳವಣಿಗೆಗಳು ಆದಾಗ ಜಿಡಿಪಿಯಲ್ಲಿಯೂ ಬದಲಾವಣೆಯಾಗಲು ಸಾಧ್ಯ ಎಂದು ಪುತ್ತೂರಿನ ನರೇಂದ್ರ ಪದವಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರೂಪಕಲಾರವರು ಹೇಳಿದರು.

ಇವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದ ಸಂಸ್ಕ್ರತಿ-ಪ್ರಸ್ತುತಿ ಎರಡನೇಯ ಸರಣಿ ಕಾರ್ಯಕ್ರಮದಲ್ಲಿ ಸಮನ್ವಯಕಾರರಾಗಿ ಭಾಗವಹಿಸಿ ಶಿಕ್ಷಣದಿಂದ ಜಿಡಿಪಿಯನ್ನು ಹೆಚ್ಚಿಸಲು ಸಾಧ್ಯವೇ ಎನ್ನುವುದರ ಬಗೆಗೆ ಮಾಹಿತಿಯನ್ನು ನೀಡಿದ್ದರಲ್ಲದೆ, ಕಾರ್ಯಕ್ರಮದಲ್ಲಿ ಮಹಿಳೆ-ಆರ್ಥಿಕತೆ ಹಾಗೂ ಅಭಿವೃದ್ಧಿ ಎಂಬ ವಿಚಾರದ ಬಗೆಗೂ ಮಾತನಾಡಿ, ಇತ್ತೀಚೆಗೆ ಮಹಿಳೆಯರು ಸ್ವಾವಲಂಭಿಗಳಾಗುತ್ತಿದ್ದಾರೆ ಹಾಗೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಹೀಗಿರುವಾಗ ಮಹಿಳೆಯ ಮೇಲಿರುವ ಕೀಳರಿಮೆ ಹಾಗೂ ಮನಸ್ಥಿತಿಯನ್ನು ನಾವಿಂದು ಬದಲಾಯಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಅನ್ನಪೂರ್ಣರವರು ಮಹಿಳೆ-ಆರ್ಥಿಕತೆ ಹಾಗೂ ಅಭಿವೃದ್ಧಿಯ ಬಗೆಗೆ ಮಾತನಾಡಿ, ಹೆಣ್ಣಿನ ಮೇಲೆ ನಡೆಯುವ ಶೋಷಣೆಗಳು ನಿಲ್ಲಬೇಕು ಹಾಗೂ ಆಕೆ ಆರ್ಥಿಕವಾಗಿ, ಮಾನಸಿಕವಾಗಿ, ಸದೃಢಳಾಗಿ ಸ್ವಾವಲಂಭಿಯಾಗಬೇಕೆಂದು ಹೇಳಿದರು. ಹಾಗೆಯೇ ವಾಣಿಜ್ಯ ವಿಬಾಗದ ಉಪನ್ಯಾಸಕಿ ಶ್ರೀಮತಿ ವಿನುತಾ, ಶಿಕ್ಷಣದಿಂದ ಜಿಡಿಪಿಯನ್ನು ಹೆಚ್ಚಿಸಲು ಸಾಧ್ಯವೇ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಇಂದು ನಮ್ಮಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದ್ದು ಎಲ್ಲರೂ ಉದ್ಯೋಗವನ್ನು ಮಾಡುತ್ತಿದ್ದಾರೆ ಅಲ್ಲದೇ ಇಂದಿನ ಹೊಸ ಶಿಕ್ಷಣ ನೀತಿಯಿಂದ ಜಿಡಿಪಿಯನ್ನು ಉನ್ನತಗೊಳಿಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೋ.ವಿ.ಜಿ.ಭಟ್, ಶ್ರೀಮತಿ ರೂಪಕಲಾ ಹಾಗೂ ಉಪನ್ಯಾಸಕಿಯರಾದ ಶ್ರೀಮತಿ ಅನ್ನಪೂರ್ಣ, ಶ್ರೀಮತಿ ವಿನುತಾ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಜ್ಯೋತಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು