ಸಾಲ ಪಡೆದವರಿಗೆ ʼಸುಪ್ರೀಂʼನಿಂದ ಬಿಗ್ ರಿಲೀಫ್: ನವೆಂಬರ್ 15 ರ ವರೆಗೆ ಕಟ್ಟಬೇಕಿಲ್ಲ ಚಕ್ರ ಬಡ್ಡಿ-ಕಹಳೆ ನ್ಯೂಸ್
ನವದೆಹಲಿ: ಸಾಲ ಪಡೆದುಕೊಂಡವರಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ನವೆಂಬರ್ 15ರವರೆಗೆ ಬಡ್ಡಿ ಮೇಲೆ ಬಡ್ಡಿಯನ್ನು ಗ್ರಾಹಕರು ಪಾವತಿಸಬೇಕಾಗಿಲ್ಲ ಎಂದು ತಿಳಿಸಿದೆ.
ಇನ್ನು ನವೆಂಬರ್ 15ರವರೆಗೆ ಯಾವುದೇ ಸಾಲ ಖಾತೆಯನ್ನ ನಿಷ್ಕ್ರಿಯ ಆಸ್ತಿ ಎಂದು ಘೋಷಿಸಲಾಗುವುದಿಲ್ಲ ಎಂದು ಹೇಳಿರುವ ಕೋರ್ಟ್, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಮನವಿಯ ಮೇರೆಗೆ ವಿಚಾರಣೆಯನ್ನ ಪ್ರಕರಣದ ವಿಚಾರಣೆಯನ್ನು ನವೆಂಬರ್ 2 ರವರೆಗೆ ಮುಂದೂಡಿದೆ.
ಇನ್ನು ಸರ್ಕಾರ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಾಲಗಳ ಮೇಲಿನ ಇಎಂಐಗೆ ವಿನಾಯಿತಿ ನೀಡಿತ್ತು. ಮೊತ್ತದ ಮೇಲೆ ಬಡ್ಡಿಯನ್ನ ನಿಗದಿಪಡಿಸಿತ್ತು. ಆದರೆ ಇಎಂಐ ಮೊತ್ತದ ಮೇಲೆ ಬಡ್ಡಿ ಹೇರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.