Recent Posts

Monday, January 20, 2025
ಪುತ್ತೂರು

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ರಚನೆ -ಕಹಳೆ ನ್ಯೂಸ್

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಇದರ ನೂತನ ತಾಲೂಕು ಸಮಿತಿ ರಚನಾ ಸಭೆಯು ಇಂದು ಪುತ್ತೂರಿನ ಬ್ಲಡ್ ಬ್ಯಾಂಕ್ ಬಿಲ್ಡಿಂಗ್‍ನಲ್ಲಿರುವ ರೋಟರಿ ಟ್ರಸ್ಟ್ ಹಾಲ್‍ನಲ್ಲಿ ಜರಗಿತು.


ಈ ನೂತನ ಸಮಿತಿಯ ಅಧ್ಯಕ್ಷರಾಗಿ ಶಾಂತಿನಗರದ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಕೆ, ಉಪಾಧ್ಯಕ್ಷರಾಗಿ ರಾಮ್‍ದಾಸ್, ಹಾಗೂ ಹೇಮಜಯರಾಮ ರೈ ಪುತ್ತೂರು ಕೋಶಾಧ್ಯಕ್ಷರಾಗಿ ಅನೀಶ್, ಉಪಾಧ್ಯಕ್ಷರಾಗಿ ನಿಶಾಂತ್ ಬನ್ನೂರು, ಜೊತೆ ಕಾರ್ಯದರ್ಶಿಯಾಗಿ ಚೈತ್ರಾ ಬಂಗೇರ, ರಾಜಶೇಖರ್ ಅವರು ಆಯ್ಕೆಯಾಗಿರುತ್ತಾರೆ.ಕಾರ್ಯಕಾರಿಣಿ ಸಮಿತಿಗೆ ಆದಿತ್ಯಾ,ಭರತ್ ಬಲ್ನಾಡ್, ಸುಮಿತ್ರಾ.ಬಿ, ಕವಿತಾ, ದೇವಿಕಾ, ಚಂದ್ರಕಾಂತ್, ಪ್ರಭಾಕರ್,  ಶಿವಪ್ರಸಾದ್, ಅಶ್ವಿನಿ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ನೂತನ ಸಮಿತಿಯ ಸಭೆಯು ದ.ಕ. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್‍ರವರ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಲಕ್ಷ್ಮಣ್ ಕುಂದರ್ ಉಪಸ್ಥಿತರಿದ್ದರು. ಹೇಮಜಯರಾಮ ರೈ ಪುತ್ತೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು