Recent Posts

Monday, January 20, 2025
ಹೆಚ್ಚಿನ ಸುದ್ದಿ

ಡ್ರಗ್ಸ್ ಪ್ರಕರಣ : ರಾತ್ರಿಪೂರ್ತಿ ಜೈಲಿನ ಅಧಿಕಾರಿಗಳ ನಿದ್ದೆಗೆಡಿಸಿದ ನಟಿ ರಾಗಿಣಿ!-ಕಹಳೆ ನ್ಯೂಸ್

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇರುವ ನಟಿ ರಾಗಿಣಿಗೆ ನಿನ್ನೆ ವಿಪರೀತ ಬೆನ್ನುನೋವು ಕಾಣಿಸಿಕೊಂಡಿರುವ ಕಾರಣ ರಾತ್ರಿಪೂರ್ತಿ ಅವರು ನರಳಾಡಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮಗೆ ತುರ್ತಾಗಿ ಬೆನ್ನುನೋವಿನ ಚಿಕಿತ್ಸೆ ನೀಡಿ, ನೋವು ತಡೆಯಲು ಆಗುತ್ತಿಲ್ಲ ಎಂದು ಒಂದೇ ಸಮನೆ ಈ ‘ನಶೆ’ ನಟಿ ಹೇಳಿದ್ದರಿಂದ ತುರ್ತಾಗಿ ಜೈಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಕೆಲ ದಿನಗಳಿಂದ ರಾಗಿಣಿ, ತಮಗೆ ಬೆನ್ನುನೋವು ಇರುವ ಬಗ್ಗೆ ಹೇಳಿದ್ದರು. ಅಲ್ಲಿಂದ ಇಲ್ಲಿಯವರೆಗೂ ತಮಗೆ ಜೈಲಿನಲ್ಲಿ ಇರಲು ಆಗುತ್ತಿಲ್ಲ, ವಿಪರೀತ ಬೆನ್ನುನೋವಾಗಿರುವ ಕಾರಣ, ಯಾವುದಾದರೂ ಖಾಸಗಿ ಆಸ್ಪತ್ರೆಗೆ ಸೇರಿಸಿ ಎಂದು ಮನವಿ ಮಾಡುತ್ತಲೇ ಬಂದಿದ್ದಾರೆ.ಇದೀಗ ನಿನ್ನೆ ರಾತ್ರಿಪೂರ್ತಿ ಜೈಲಿನಲ್ಲಿ ಗೋಳಾಟ ನಡೆಸಿ ಅಧಿಕಾರಿಗಳ ನಿದ್ದೆ ಗೆಡಿಸಿರುವ ನಟಿಗೆ ರಾತ್ರಿ ಪೂರ್ತಿ ಚಿಕಿತ್ಸೆ ನೀಡಲಾಗಿದೆಯಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ, ಬೆನ್ನುನೋವಿನ ಕಾರಣ ನೀಡಿ, ರಾಗಿಣಿ ಪರ ವಕೀಲರು ಕೋರ್ಟ್​ ಮೊರೆ ಕೂಡ ಹೋಗಿದ್ದಾರೆ. ಜೈಲಿನಲ್ಲಿರುವ ಆಸ್ಪತ್ರೆಯ ಚಿಕಿತ್ಸೆ ಸಾಲುತ್ತಿಲ್ಲ. ಯಾವುದಾದರೂ ಖಾಸಗಿ ಆಸ್ಪತ್ರೆಗೆ ತಮ್ಮನ್ನು ದಾಖಲಿಸಲು ಅನುಮತಿ ನೀಡಿ ಎಂದು ಅರ್ಜಿಯಲ್ಲಿ ಅವರು ತಿಳಿಸಿದ್ದಾರೆ. ಡ್ರಗ್ಸ್​ ಪ್ರಕರಣದಲ್ಲಿ ರಾಗಿಣಿಯನ್ನು ಕಳೆದ ಸೆಪ್ಟೆಂಬರ್​ 4ರಂದು ಬಂಧಿಸಲಾಗಿದೆ. 14ರಿಂದ ಅವರು ಜೈಲಿನಲ್ಲಿ ಇದ್ದು, ಇದೀಗ ಒಂದು ತಿಂಗಳು ಜೈಲಿನಲ್ಲಿ ಕಳೆದಿದ್ದಾರೆ.