ಬೆಂಗಳೂರು : ಆರ್.ಆರ್. ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನೊಂದು ಬೆಂದಿರುವ ಮಹಿಳೆಯನ್ನು ನಾವು ಅಭ್ಯರ್ಥಿ ಮಾಡಿದ್ದೇವೆ. ನಾಮಿನೇಷನ್ ಫೈಲ್ ಮಾಡಲು ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಸಮಯ ತೆಗೆದುಕೊಂಡು ಹೋಗಿದ್ದೇವೆ. ನಿಯಮ ಉಲ್ಲಂಘನೆ ಎಂದು ನಮ್ಮ ಅಭ್ಯರ್ಥಿ ಮೇಲೆ ಕೇಸ್ ಹಾಕಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇಷ್ಟು ನೀಚ ರಾಜಕಾರಣ ನಾನು ಎಂದೂ ನೋಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಾಮಪತ್ರಿಕೆ ಸಲ್ಲಿಕೆ ವೇಳೆ ಇಬ್ಬರು ಮಂತ್ರಿಗಳು ನೂರು ಮೀಟರ್ ಒಳಗೇ ಇದ್ದರು. ಕೇಸ್ ಹಾಕೋದಾದ್ರೆ ಸಿದ್ದರಾಮಯ್ಯ ಮೇಲೆ ಹಾಕಿ, ಒಬ್ಬ ಹೆಣ್ಣು ಮಗಳ ಮೇಲೆ ಕೇಸ್ ಹಾಕ್ತೀರಾ? ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇಷ್ಟು ನೀಚ ರಾಜಕಾರಣ ನಾನು ಎಂದೂ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು.