Recent Posts

Monday, January 20, 2025
ಹೆಚ್ಚಿನ ಸುದ್ದಿ

ಮೋದಿಯವರ ಆಸ್ತಿಯಲ್ಲಿ ಎಷ್ಟು ಏರಿಕೆಯಾಗಿದೆ ಗೊತ್ತಾ.? ಇಲ್ಲಿದೆ ಸಂಪೂರ್ಣ ವಿವರ-ಕಹಳೆ ನ್ಯೂಸ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸ್ತಿಯಲ್ಲಿ ಹೆಚ್ಚಳವಾಗಿದೆ. ನರೇಂದ್ರ ಮೋದಿಯವರ ನಿವ್ವಳ ಮೌಲ್ಯ ಹೆಚ್ಚಾಗಿದೆ. ಆದ್ರೆ ಗೃಹ ಸಚಿವ ಅಮಿತ್ ಶಾ ನಿವ್ವಳ ಆಸ್ತಿಯಲ್ಲಿ ಇಳಿಕೆ ಕಂಡು ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿ 15 ತಿಂಗಳಲ್ಲಿ 36.53 ಲಕ್ಷ ರೂಪಾಯಿ ಹೆಚ್ಚಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ಒಟ್ಟು ಆಸ್ತಿ ಜೂನ್ 30ರವರೆಗೆ 2.85 ಕೋಟಿಯಾಗಿದೆ. ಹಿಂದಿನ ವರ್ಷ ಒಟ್ಟು ಆಸ್ತಿ ಮೌಲ್ಯ 2.49 ಕೋಟಿಯಿತ್ತು. ಕಳೆದ ಒಂದು ವರ್ಷದಲ್ಲಿ ಸುಮಾರು 3.3 ಲಕ್ಷ ರೂಪಾಯಿ ಬ್ಯಾಂಕ್ ಠೇವಣಿ ಮತ್ತು 33 ಲಕ್ಷ ರೂಪಾಯಿ ಸುರಕ್ಷಿತ ಹೂಡಿಕೆಯಿಂದ ಹೆಚ್ಚಾಗಿದೆ. ಅಕ್ಟೋಬರ್ 12ರಂದು ನರೇಂದ್ರ ಮೋದಿ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ನರೇಂದ್ರ ಮೋದಿಯವರ ಸ್ಥಿರ ಆಸ್ತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಗಾಂಧಿನಗರದಲ್ಲಿ 1.1 ಕೋಟಿ ರೂಪಾಯಿ ಮೌಲ್ಯದ ಜಮೀನು ಮತ್ತು ಮನೆ ಇದೆ. ಜೀವ ವಿಮೆ, ರಾಷ್ಟ್ರೀಯ ಉಳಿತಾಯ ಪತ್ರ ಮತ್ತು ಮೂಲಸೌಕರ್ಯ ಬಾಂಡ್‌ಗಳ ಮೂಲಕ ತೆರಿಗೆಯನ್ನು ಉಳಿಸುತ್ತಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗಾಂಧಿನಗರ ಶಾಖೆಯಲ್ಲಿ ಅದರ ಸ್ಥಿರ ಠೇವಣಿ ಮೊತ್ತವು 2020 ರ ಜೂನ್ 30 ರ ವೇಳೆಗೆ 1,60,28,039 ರೂಪಾಯಿಗಳಿಗೆ ಏರಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು 1,27,81,574 ರೂಪಾಯಿಯಿತ್ತು.

ಇನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಅಮಿತ್ ಶಾ ಆಸ್ತಿಯಲ್ಲಿ ಇಳಿಕೆಯಾಗಿದೆ.ಕಳೆದ ವರ್ಷ 32.3 ಕೋಟಿ ಇದ್ದ ಅಮಿತ್ ಶಾ ನಿವ್ವಳ ಆಸ್ತಿ ಈ ವರ್ಷ 28.63 ಕೋಟಿಯಾಗಿದೆ. ಷೇರು ಮಾರುಕಟ್ಟೆಯಲ್ಲಾದ ಏರುಪೇರು ಅವ್ರ ಆಸ್ತಿ ಮೌಲ್ಯದ ಇಳಿಕೆಗೆ ಕಾರಣವಾಗಿದೆ. ಅಮಿತ್ ಷಾ 10 ಸ್ಥಿರ ಆಸ್ತಿಗಳನ್ನು ಹೊಂದಿದ್ದಾರೆ. ಇವೆಲ್ಲವೂ ಗುಜರಾತಿನಲ್ಲಿದೆ. ತಾಯಿಯಿಂದ ಬಂದ ಆಸ್ತಿ 13.56 ಕೋಟಿ ಇದೆ. ಅಮಿತ್ ಶಾ ಅವರ ಕೈಯಲ್ಲಿ 15,814 ರೂಪಾಯಿ ನಗದಿದೆ. 1.04 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇದೆ. 13.47 ಲಕ್ಷ ಮೌಲ್ಯದ ವಿಮೆ ಪಾಲಿಸಿಯಿದೆ. 2.79 ಲಕ್ಷದ ಸ್ಥಿರ ಠೇವಣಿಯನ್ನು ಹೊಂದಿದ್ದಾರೆ.