Recent Posts

Monday, January 20, 2025
ರಾಷ್ಟ್ರೀಯ

ಹಸಿವು ನೀಗಿಸಲಾಗದೇ ಕಂದನ ಕೊಂದ ಮಹಿಳೆ-ಕಹಳೆ ನ್ಯೂಸ್

ಲಖ್ನೋ: ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಮಹಿಳೆ ಸಾಕಲಾಗದ ಕಾರಣ ಮಗಳನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತೀವ್ರ ಬಡತನದ ಕಾರಣದಿಂದ ಊಟಕ್ಕೂ ಪರದಾಡುತ್ತಿದ್ದ ಮಹಿಳೆ 6 ವರ್ಷದ ಮಗಳನ್ನು ಕೊಲೆ ಮಾಡಿದ್ದಾಳೆ. ಹ್ಯಾಂಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಭೆಸ್ಕಿಯಲ್ಲಿ ಘಟನೆ ನಡೆದಿದೆ. ಮಹಿಳೆಗೆ ಮೂವರು ಮಕ್ಕಳಿದ್ದು ಮಗಳ ಮುಂದಿನ ಭವಿಷ್ಯದ ಬಗ್ಗೆ ನಿರ್ಧರಿಸಿ ಇಂತಹ ಕೃತ್ಯವೆಸಗಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಮಹಿಳೆಯನ್ನು ಉಷಾದೇವಿ ಎಂದು ಗುರುತಿಸಲಾಗಿದೆ. ಆಕೆಯ ಕುಟುಂಬ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಆಕೆಯ ಪತಿ ಅಪಘಾತವಾದ ನಂತರ ಕೆಲಸವಿಲ್ಲದೇ ಮನೆಯಲ್ಲೇ ಇದ್ದ. 5 ಜನರನ್ನು ಕುಟುಂಬವನ್ನು ಸಾಕಿ ಸಲಹಬೇಕಾದ ಜವಾಬ್ದಾರಿ ಉಷಾದೇವಿ ಮೇಲಿದ್ದು, ಕುಟುಂಬಕ್ಕೆ ಊಟದ ವ್ಯವಸ್ಥೆ ಕಲ್ಪಿಸಲು ಕಷ್ಟ ಸಾಧ್ಯವಾದ ಹಿನ್ನೆಲೆಯಲ್ಲಿ ಮಗಳನ್ನು ಕೊಲೆ ಮಾಡಿದ್ದಾಳೆ ಎಂದು ಹೇಳಲಾಗಿದೆ.