Recent Posts

Monday, January 20, 2025
ಸುದ್ದಿ

ನಾಲ್ಕು ವರ್ಷದ ಬಾಲಕನ ಹೂತು ಹಾಕಿದ ಯುವತಿ-ಕಹಳೆ ನ್ಯೂಸ್

ಮುಂಬೈ:ಅಪಾರ್ಟ್​ಮೆಂಟ್​ ಕಟ್ಟಡದಲ್ಲಿನ ಮನೆಯೊಂದರಿಂದ ಹದಿನೇಳರ ಬಾಲಕಿಯನ್ನು ಪೊಲೀಸರು ಕರೆದೊಯ್ಯುತ್ತಿದ್ದರೆ ಅಲ್ಲಿದ್ದ ಇತರ ಮನೆಗಳವರೆಲ್ಲ ದಿಗ್ಭ್ರಮೆಯಿಂದ ನೋಡ್ತಾ ನಿಂತಿದ್ದರು. ನಾಲ್ಕು ವರ್ಷದ ಬಾಲಕನ ಹತ್ಯೆ ಪ್ರಕರಣದ ಆರೋಪಿ ಆಕೆ! ಹತ್ಯೆ ನಡೆದದ್ದು ಸೆಪ್ಟೆಂಬರ್ 18ರಂದು. ವಿಸ್ತೃತವಾದ ತನಿಖೆ ನಡೆಸಿ, ಸಾಕ್ಷ್ಯಾಧಾರ ಸಂಗ್ರಹಿಸಿ ಆರೋಪಿಯನ್ನು ಬಂಧಿಸಿದ್ದು ನಿನ್ನೆ!

ಜಾಹೀರಾತು
ಜಾಹೀರಾತು
ಜಾಹೀರಾತು

ತನಿಖೆ ವೇಳೆ ಪೊಲೀಸರಿಗೆ ಸಿಕ್ಕ ಮಾಹಿತಿ ಇಷ್ಟು- ಅಂದು ಸೆಪ್ಟೆಂಬರ್ 18. ನಾಲ್ಕು ವರ್ಷದ ಬಾಲಕ ಗ್ರೌಂಡ್ ಫ್ಲೋರ್​ನಲ್ಲಿ ಆಟ ಆಡ್ತಾ ಇದ್ದ. ಆ ಸಂದರ್ಭದಲ್ಲಿ ಮೂತ್ರ ವಿಸರ್ಜನೆ ಮಾಡಬೇಕೆಂದೆನಿಸಿ ಆತ ಮನೆಯಲ್ಲಿ ಯಾರೂ ಇಲ್ಲದ ಕಾರಣ ಈ 17 ವರ್ಷದ ಹುಡುಗಿಯ ಮನೆಗೆ ತೆರಳಿದ್ದ. ಮನೆಯಲ್ಲಿ ಆಕೆ ಒಬ್ಬಳೇ ಇದ್ದಳು. ಆತ ಆಕೆಯೊಂದಿಗೆ ಆಟ ಆಡೋದಕ್ಕೆ ಶುರುಮಾಡಿದ. ಆಟದ ನಡುವೆ ಆಕೆ ತಲೆದಿಂಬನ್ನು ಮಗುವಿನ ಮುಖಕ್ಕೆ ಹಿಡಿದಿದ್ದಳು. ಆತ ಪ್ರಜ್ಞ ಕಳೆದುಕೊಂಡಿದ್ದ. ಆತ ಚಟುವಟಿಕೆ ನಿಲ್ಲಿಸಿದ್ದರಿಂದ ಗಾಬರಿಯಾದ ಹುಡುಗಿ ಕೂಡಲೇ ಮನೆಯಲ್ಲಿದ್ದ ಗೋಣಿ ಚೀಲದಲ್ಲಿ ಆತನನ್ನು ತುಂಬಿ ಕಿಟಕಿಯಿಂದ ಹೊರಕ್ಕೆ ಎಸೆದಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕ ತಾಯಿ ಮತ್ತು ಸಹೋದರಿ ಮನೆಗೆ ಬಂದು ಬಾಲಕನಿಗೆ ಹುಡುಕಾಟ ಶುರುಮಾಡಿದರು. ಕೊನೆಗೆ ಈ ಬಾಲಕಿಯ ಮನೆಯ ಕಿಟಕಿಯ ಕೆಳಗೆ ಗೋಣಿ ಚೀಲದೊಳಗೆ ಬಾಲಕ ಪತ್ತೆಯಾಗಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಈ ಅಸಹಜ ಸಾವಿನ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದರು.

ಬಾಲಕಿಯ ಮನೆಯ ಕಿಟಕಿಯ ಕೆಳಗೇ ಮಗು ಪತ್ತೆಯಾದ ಕಾರಣ, ಮೊದಲನೇ ದಿನದಿಂದಲೂ ಹುಡುಗಿಯ ಬಗ್ಗೆ ಸಂದೇಹ ಮೂಡಿತ್ತು. ಬಳಿಕ ಗೋಣಿ ಚೀಲದ ಗುರುತು ಹಿಡಿದು ಅಲ್ಲಿದ್ದ 16 ಮನೆಗಳನ್ನು ತಪಾಸಣೆ ನಡೆಸಿದಾಗ ಅಂಥದ್ದೇ ಗೋಣಿ ಚೀಲ ಹುಡುಗಿಯ ಮನೆಯಲ್ಲಿ ಪತ್ತೆಯಾಗಿತ್ತು. ವಿಚಾರಣೆ ತೀವ್ರಗೊಂಡಾಗ ಹುಡುಗಿ ನಡೆದ ಘಟನೆಯನ್ನು ವಿವರಿಸಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.