Recent Posts

Sunday, January 19, 2025
ರಾಜ್ಯಸುದ್ದಿ

ಕೆಜಿಹಳ್ಳಿ,ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಯಾವ ಕಾಂಗ್ರೆಸಿಗರ ಕೈವಾಡವೂ ಇಲ್ಲ : ಡಿಕೆಶಿ-ಕಹಳೆ ನ್ಯೂಸ್

ಬೆಂಗಳೂರು- ಕೆಜಿಹಳ್ಳಿ, ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್‍ಕುಮಾರ್ ಸೇರಿದಂತೆ ಯಾರ ಕೈವಾಡವೂ ಇಲ್ಲ. ಪೆÇಲೀಸರು ಸಲ್ಲಿಸಿರುವ ದೋಷಾರೋಪಣ ಪಟ್ಟಿ ಸಂಪರ‍್ಣ ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಬೆಳಗ್ಗೆ ತಮ್ಮ ಮನೆಯಲ್ಲಿ ಕರೆದಿದ್ದ ತರ‍್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಜಿಹಳ್ಳಿ, ಡಿಜೆಹಳ್ಳಿ ಗಲಭೆಗೆ ರ‍್ಕಾರ ಹಾಗೂ ಪೊಲೀಸರ ವೈಫಲ್ಯವೇ ಕಾರಣ.ಬಿಜೆಪಿ ರ‍್ಕಾರ ರಾಜಕೀಯ ದುರುದ್ದೇಶಕ್ಕಾಗಿ ಬಲವಂತವಾಗಿ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಸರ‍್ಪಡೆ ಮಾಡುತ್ತಿದೆ. ಇದಕ್ಕೆಲ್ಲಾ ಕಾಂಗ್ರೆಸಿಗರು ಹೆದರುವುದಿಲ್ಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾವು ಮಾಜಿ ಗೃಹ ಸಚಿವರನ್ನೊಳಗೊಂಡ ಸಮಿತಿಯನ್ನು ರಚಿಸಿ ತನಿಖೆ ಮಾಡಿಸಿದ್ದು, ಅದರ ವರದಿ ನಮ್ಮ ಬಳಿ ಇದೆ. ನಮಗೆ ಸ್ಪಷ್ಟವಾಗಿ ಗೊತ್ತಿದೆ. ಗಲಭೆಯಲ್ಲಿ ಯಾವ ಕಾಂಗ್ರೆಸಿಗರ ಕೈವಾಡವೂ ಇಲ್ಲ. ಬಿಜೆಪಿ ರಾಜಕಾರಣಕ್ಕಾಗಿಯೇ ಪೆÇಲೀಸರನ್ನು ದರ‍್ಬಳಕೆ ಮಾಡಿಕೊಳ್ಳುತ್ತಿದೆ ಎಂದು ತಿರುಗೇಟು ನೀಡಿದರು.ಶಾಸಕ ಅಖಂಡ ಶ್ರೀನಿವಾಸಮರ‍್ತಿ ಅವರು ಮಾಜಿ ಮೇಯರ್ ಸಂಪತ್‍ಕುಮಾರ್ ಅವರನ್ನು ಅಮಾನತ್ತು ಮಾಡುವಂತೆ ಮನವಿ ಮಾಡಿಲ್ಲ. ಕಾಂಗ್ರೆಸ್ ನಾಯಕರ ನಡುವೆ ಯಾವ ಒಳಜಗಳವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.