ಡ್ರಗ್ಸ್ ಪ್ರಕರಣ :ವಿಚಾರಣೆಗೆ ಹಾಜರಾಗುವಂತೆ ಆದಿತ್ಯ ಆಳ್ವ ಸೋದರಿ ಪ್ರಿಯಾಂಕ ಆಳ್ವ ಒಬೆರಾಯ್ ಗೆ ಸಿಸಿಬಿ ನೊಟೀಸ್-ಕಹಳೆ ನ್ಯೂಸ್
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಪತ್ನಿ ಹಾಗೂ ಆದಿತ್ಯ ಆಳ್ವಾ ಸೋದರಿ ಪ್ರಿಯಾಂಕಾ ಆಳ್ವಾಗೆ ಸಿಸಿಬಿ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಮಾಜಿ ಸಚಿವ ಜೀವರಾಜ್ ಅವರ ಪುತ್ರ ಆದಿತ್ಯ ಆಳ್ವ ಹೆಸರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಆದಿತ್ಯ ಆಳ್ವ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಪೊಲೀಸರು ಆದಿತ್ಯ ಆಳ್ವಗಾಗಿ ಶೋಧ ನಡೆಸುತ್ತಿದ್ದಾರೆ.
ಇನ್ನು ಆದಿತ್ಯ ಆಳ್ವ ಮುಂಬೈನ ತನ್ನ ಸೋದರಿ ಪ್ರಿಯಾಂಕ ಆಳ್ವ ಒಬೆರಾಯ್ ಮನೆಯಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ನಿನ್ನೆ ವಿವೇಕ್ ಒಬೆರಾಯ್ ಮನೆ ಮೇಲೆ ಸಿಸಿಬಿ ರೇಡ್ ಮಾಡಿದ್ದು, ಪ್ರಿಯಂಕ ಆಳ್ವ ಒಬೆರಾಯ್ ಗೆ ಸಿಸಿಬಿ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.