Sunday, November 24, 2024
ಹೆಚ್ಚಿನ ಸುದ್ದಿ

ಕನಿಷ್ಠ ʼಮದುವೆ ವಯಸ್ಸಿನʼ ಕುರಿತು ʼಪ್ರಧಾನಿʼಗಳಿಂದ ಮುಖ್ಯ ಮಾಹಿತಿ..!-ಕಹಳೆ ನ್ಯೂಸ್

ನವದೆಹಲಿ: ಹೆಣ್ಣು ಮಕ್ಕಳ ಮದುವೆ ವಯಸ್ಸನ್ನ ಹೆಚ್ಚಿಸಬೇಕು ಎನ್ನುವ ಕೂಗು ತುಂಬಾ ವರ್ಷಗಳಿಂದ ಕೇಳಿ ಬರ್ತಿದೆ. ಅದ್ರಂತೆ, ಪ್ರಧಾನಿ ಮೋದಿ ಇಂದು ಹೆಣ್ಮಕ್ಕಳ ಮದುವೆಯಾಗುವುದಕ್ಕೆ ಇರುವ ಕನಿಷ್ಠ ವಯಸ್ಸು ಎಷ್ಟಿರಬೇಕು ಎಂಬ ಬಗ್ಗೆ ಸರ್ಕಾರ ಶೀಘ್ರವೇ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಣ್ಮಕ್ಕಳು ಮದುವೆಯಾಗಲು ಕನಿಷ್ಟ ಎಷ್ಟು ವಯಸ್ಸಿರಬೇಕು ಎಂಬುದನ್ನ ಅಧ್ಯಯನ ಮಾಡಿ ಶಿಫಾರಸು ಮಾಡಲು ಸಮಿತಿಯೊಂದನ್ನ ರಚಿಸಲಾಗಿದೆ. ಅದು ನೀಡುವ ಶಿಫಾರಸಿನ ಮೇರೆಗೆ ಸರ್ಕಾರ ನಿರ್ಣಯ ತೆಗೆದುಕೊಳ್ಳಲಿದೆ ಎಂದರು. ಇನ್ನು ಶಿಕ್ಷಣ ಕ್ಷೇತ್ರದಲ್ಲಿಯೂ ಹೆಣ್ಮಕ್ಕಳು ಪ್ರಗತಿ ಸಾಧಿಸುತ್ತಿದ್ದಾರೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ನೋಂದಣಿ ಹುಡುಗರ ನೋಂದಣಿಗಿಂತ ಹೆಣ್ಣುಮಕ್ಕಳ ನೋಂದಾಣಿ ಹೆಚ್ಚಾಗಿದೆ ಎಂದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಫುಡ್​ ಆಯಂಡ್ ಅಗ್ರಿಕಲ್ಚರ್​ ಆರ್ಗನೈಸೇಷನ್​ (ಎಫ್​ಎಒ)ನ 75ನೇ ವಾರ್ಷಿಕೋತ್ಸವದಲ್ಲಿ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಈ ವಿಷ್ಯ ಪ್ರಸ್ತಾಪಿಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದ್ಹಾಗೆ, ಪ್ರಸ್ತುತ ಮಹಿಳೆಯರ ಮದುವೆಯ ಕನಿಷ್ಟ ವಯಸ್ಸು18 ವರ್ಷವಿದ್ದರೇ, ಪುರುಷರಿಗೆ ಕನಿಷ್ಠ 21 ವರ್ಷ ವಯಸ್ಸು ಆಗಿರಬೇಕು.