Saturday, November 23, 2024
ಹೆಚ್ಚಿನ ಸುದ್ದಿ

ಮತಾಂತರಗೊಂಡು ಹೆಣವಾದ ಯುವತಿ! -ಕಹಳೆ ನ್ಯೂಸ್

ಲಖನೌ: ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವತಿಯೊಬ್ಬಳು ನ್ಯಾಯಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕೋರಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಂಡನ ಮನೆಯವರು ಕೊಡುವ ಹಿಂಸೆಯನ್ನು ಸಹಿಸಲಾರದೇ ಉತ್ತರ ಪ್ರದೇಶದ ವಿಧಾನಸಭಾ ಕಟ್ಟಡದ ಎದುರೇ ಮೊನ್ನೆ ಬೆಂಕಿಹಚ್ಚಿಕೊಂಡಿದ್ದ ಈ ಯುವತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ. ಅಂಜನಾ ತಿವಾರಿ ಅಲಿಯಾಸ್​ ಆಯೇಷಾ ಈ ದುರ್ದೈವಿ. ಗಂಡನ ಮನೆಯವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರಿಂದ ಮುಖ್ಯಮಂತ್ರಿಗಳನ್ನೇ ಭೇಟಿ ಮಾಡಿ ನ್ಯಾಯಕ್ಕಾಗಿ ಕೋರಬೇಕು ಎಂದುಕೊಂಡಳು. ಆದರೆ ಯುವತಿಗೆ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಸರ್ಕಾರದ ಗಮನ ಸೆಳೆಯಲು ವಿಧಾನಸಭಾದ ಕಟ್ಟಡದ ಎದುರೇ ಬೆಂಕಿ ಹಚ್ಚಿಕೊಂಡು ಇದೀಗ ಹೆಣವಾಗಿದ್ದಾಳೆ!

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಆಗಿದ್ದವಳು ಮುಸ್ಲಿಂ ಆದದ್ದು ಹೇಗೆ?

ಅಂಜನಾ ಈ ಮೊದಲು ಅಖಿಲೇಶ್​ ಎಂಬುವವರನ್ನು ವಿವಾಹವಾಗಿದ್ದರು. ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಅಂಜನಾ, ಆಸಿಫ್​ ಎಂಬುವವನ ಬಲೆಗೆ ಬಿದ್ದರು. ಈಕೆಯನ್ನು ಪ್ರೀತಿಸುವ ನಾಟಕವಾಗಿ, ಆಕೆಯನ್ನು ಬಲೆಗೆ ಬೀಳಿಸಿಕೊಂಡ ಆಸಿಫ್​, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಮದುವೆಯಾಗಿ ಮನೆಯಲ್ಲಿ ಇಟ್ಟುಕೊಂಡ. ನಂತರ ಅಂಜನಾಳ ಹೆಸರನ್ನು ಆಯೇಷಾ ಎಂದು ಬದಲಾಯಿಸಲಾಯಿತು.

ನಂತರ ಮನೆಯಲ್ಲಿ ಈಕೆಯನ್ನು ಬಿಟ್ಟು ಸೌದಿಗೆ ಹಾರಿದ. ನಂತರ ಆತ ಇತ್ತ ಸುಳಿಯಲೇ ಇಲ್ಲ. ಗಂಡನ ಮನೆಯಲ್ಲಿ ಯುವತಿ ಇನ್ನಿಲ್ಲದ ಹಿಂಸೆ ಅನುಭವಿಸಲು ಶುರು ಮಾಡಿದರು. ಅತ್ತೆ-ಮಾವ ಇಬ್ಬರೂ ವಿಪರೀತ ಹಿಂಸೆ ಕೊಡಲು ಶುರುಮಾಡಿದರು. ಹಿಂಸೆಯನ್ನು ತಾಳದೇ ಈಕೆ, ಪೊಲೀಸರಲ್ಲಿ ದೂರು ದಾಖಲಿಸಲು ಹೋದರೆ, ಅವರು ದೂರು ದಾಖಲು ಮಾಡಿಕೊಳ್ಳಲಿಲ್ಲ. ತನಗಾಗಿರುವ ಅನ್ಯಾಯವನ್ನು ಮುಖ್ಯಮಂತ್ರಿ ಎದುರು ಹೇಳಿಕೊಳ್ಳಲು ವಿಫಲ ಯತ್ನ ಮಾಡಿದರು.

ನಂತರ ತನ್ನನ್ನು ಮೋಸಗೊಳಿಸಿದವರಿಗೆ ಶಿಕ್ಷೆಯಾಗಲೇಬೇಕು, ಇದಕ್ಕಾಗಿ ತನ್ನ ಜೀವ ಹೋದರೂ ಪರವಾಗಿಲ್ಲ ಎಂದು ವಿಧಾನಸಭೆಯ ಕಟ್ಟಡದೆದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ನಂತರ ಅಲ್ಲಿದ್ದ ವಿಧಾನಸೌಧದ ಸಿಬ್ಬಂದಿ ದೌಡಾಯಿಸಿ, ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು.

ಸಾಯುವ ಮುನ್ನ ಎಲ್ಲಾ ವಿಷಯಗಳನ್ನು ಹೇಳಿದ್ದಾಳೆ ಈಕೆ. ಗಂಡನ ಮನೆಯವರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೆಲವೇ ಪ್ರಕರಣಗಳು ಕಾವು ಪಡೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ಮತಾಂತರಗೊಂಡು ಅನ್ಯಾಯವಾಗಿ ಬಲಿಯಾಗಿರುವ ಈ ಹೆಣ್ಣುಮಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎನ್ನುವ ಕೂಗು ಇದೀಗ ಶುರುವಾಗಿದೆ