Tuesday, January 21, 2025
ಪುತ್ತೂರು

ಎಸ್.ಎಸ್.ಎಲ್.ಸಿ ಮರುಪರೀಕ್ಷೆಯಲ್ಲಿ 95% ಫಲಿತಾಂಶ ಸೋತವರಿಗೆ ದಾರಿದೀಪವಾದ ಪ್ರಗತಿ ಸ್ಟಡಿ ಸೆಂಟರ್-ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಟಿಂಗ್ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜುಕೇಶನಲ್ ಫೌಂಡೇಶನ್(ರಿ.)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗಾಗಿಯೇ ಕಳೆದ 13 ವರುಷಗಳಿಂದ ತನ್ನ ಸೇವೆಯನ್ನು ನೀಡುತ್ತಾ ಬಂದಿದ್ದು, 2019-20ನೇ ಮರುಪರೀಕ್ಷೆಯಲ್ಲಿ ದಾಖಲೆಯ 95% ಫಲಿತಾಂಶ ಬಂದಿರುತ್ತದೆ.

ದ.ಕ, ಕೊಡಗು, ಚಿಕ್ಕಮಂಗಳೂರು, ಬೆಂಗಳೂರು ಹಾಸನದಿಂದ ಬಂದ ಒಟ್ಟಾರೆ 65 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, 62 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.  ಕೊರೋನಾ ಮಧ್ಯೆಯು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದುದರ ಪರಿಣಾಮ ಅಧಿಕ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮರುಪರೀಕ್ಷೆಗೆ ಎಲ್ಲಾ ರೀತಿಯ ಸಿದ್ದತಾ ತರಗತಿಯನ್ನು ಯಶಸ್ವಿಯಾಗಿ ನಡೆಸಿದ ಪರಿಣಾಮ 3,4 ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಉತ್ತಮ ಫಲಿತಾಂಶ ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿರುವುದು ಹೆಮ್ಮೆಯ ಸಂಗತಿ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ.ಹೇಮಲತಾ ಗೋಕುಲ್ನಾಥ್ರವರು ಸಂತಸ ಹಂಚಿಕೊಂಡಿದ್ದಾರೆ.
ವಿವಿಧ ತರಗತಿಗಳು ಲಭ್ಯ: ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿ 15ವರ್ಷದಿಂದ 17ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ನೇರವಾಗಿ ದ್ವಿತೀಯ ಪಿಯುಸಿಗೆ ದಾಖಲಾತಿ ಮಾಡಲಾಗುವುದು. ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಕ್ಕೆ ಟ್ಯೂಷನ್ ತರಗತಿಗಳು ಈಗಾಗಲೇ ಪ್ರಾರಂಭಗೊಂಡಿದೆ. ಮಾಹಿತಿ ಕೊರತೆಯಿಂದ ಎಸ್.ಎಸ್.ಎಲ್.ಸಿ ಮರುಪರೀಕ್ಷೆಯಲ್ಲೂ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರತಿನಿತ್ಯ ಟ್ಯೂಷನ್ ತರಗತಿಗಳನ್ನು ಪ್ರಾರಂಭಿಸಲಾಗುವುದು. ಎಲ್ಲಾ ವಿಷಯಗಳಿಗೂ ತರಗತಿಗಳು ಲಭ್ಯವಿದೆ. ಈ ಎಲ್ಲಾ ತರಗತಿಗಳು ಸೋಮವಾರದಿಂದ ಆರಂಭಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ನೇರವಾಗಿ ಅಥವಾ 9900109490 ಗೆ ಸಂಪರ್ಕಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು