Tuesday, January 21, 2025
ಪುತ್ತೂರು

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ-ಕಹಳೆ ನ್ಯೂಸ್

ಪುತ್ತೂರು: ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2020ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹಲವು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ರಾಷ್ಟ್ರ ಮಟ್ಟದ ಉತ್ತಮ ರ‍್ಯಾಂಕ್ ಗಳನ್ನು ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

      ಅಕ್ಷಯ್ ಪಾಂಗಾಳ್

720 ಅಂಕಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಲ್ಲಿ ಪುತ್ತೂರಿನ ದಿನೇಶ್ ಪಾಂಗಳ್ ಮತ್ತು ಸಂಧ್ಯಾ ಪಾಂಗಳ್ ರವರ ಪುತ್ರ ಅಕ್ಷಯ್ ಪಾಂಗಾಳ್-642 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 5352 ನೇ ರ‍್ಯಾಂಕ್ ನ್ನು ಗಳಿಸಿರುತ್ತಾನೆ.

                     ಈಶ್ವರ ಪ್ರಸನ್ನ ಬಿ. ಎನ್.

ವೀರಕಂಬದ ನಾರಾಯಣ ಭಟ್ ಮತ್ತು ರಜನಿ ಭಟ್ ದಂಪತಿಗಳ ಪುತ್ರ ಈಶ್ವರ ಪ್ರಸನ್ನ ಬಿ. ಎನ್.-597 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 21267 ನೇ ರ‍್ಯಾಂಕ್ ನ್ನು ಗಳಿಸಿರುತ್ತಾನೆ.

          ವಿಜಿತ್ ಕೃಷ್ಣ

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ರಾಮಚಂದ್ರ ರಾವ್ ಮತ್ತು ಗೀತಾ ರಾವ್ ದಂಪತಿಗಳ ಪುತ್ರ ವಿಜಿತ್ ಕೃಷ್ಣ -568 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 37400 ನೇ ರ‍್ಯಾಂಕ್ ನ್ನು ಗಳಿಸಿರುತ್ತಾನೆ.

     ಅಂಜಲಿ

ನೆಹರೂನಗರದ ಬಿ ವಸಂತ ಶಂಕರ್ ಮತ್ತು ಗೀತಾ ವಸಂತ್ ದಂಪತಿಗಳ ಪುತ್ರಿ ಅಂಜಲಿ-561 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 41409 ನೇ ರ‍್ಯಾಂಕ್ ನ್ನು ಗಳಿಸಿದ್ದಾಳೆ.

       ಶಮಾ ಕೆ

ಪುತ್ತೂರಿನ ಡಾ| ಸುಬ್ರಹ್ಮಣ್ಯ ಕೆ ಮತ್ತು ರೇವತಿ ಎಂ ಬಿ ದಂಪತಿಗಳ ಪುತ್ರಿ ಶಮಾ ಕೆ-536 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 58462 ನೇ ರ‍್ಯಾಂಕ್ ನ್ನು ಗಳಿಸಿದ್ದಾಳೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.