Recent Posts

Friday, November 22, 2024
ಶಿಕ್ಷಣ

ನೀಟ್ 2020 : ಅಂಬಿಕಾ ವಿದ್ಯಾಲಯಕ್ಕೆ ದಾಖಲೆಯ ಫಲಿತಾಂಶ- ಕಹಳೆ ನ್ಯೂಸ್

ವೈದ್ಯಕೀಯ ವೃತ್ತಿ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ, ನೀಟ್-2020 ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ದಾಖಲೆಯ ಫಲಿತಾಂಶ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

  1. ಶ್ರೀಹರಿ ಎಸ್ (627 ಅಂಕ)                        2. ಶ್ರೀಜಿತ್ ಎಂ (539 ಅಂಕ)               3.ನದೀಂ ಡಿ ಕೆ (533 ಅಂಕ)

ವಿದ್ಯಾರ್ಥಿಯಾದ ಶ್ರೀಹರಿ ಎಸ್ 627 ಅಂಕಗಳೊಂದಿಗೆ 4792ನೇ ರ‍್ಯಾಂಕ್  ಗಳಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಸುಮಾರು 14.3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಈ ಸಾಧನೆ ಗಮನಾರ್ಹವಾಗಿದೆ. ಉಳಿದಂತೆ ವಿದ್ಯಾರ್ಥಿಗಳಾದ ಶ್ರೀಜಿತ್ ಎಂ (539 ಅಂಕ), ನದೀಂ ಡಿ ಕೆ (533 ಅಂಕ), ಸ್ಪೂರ್ತಿ ಸಾಲ್ಯಾನ್ (520 ಅಂಕ), ದೀಕ್ಷಾ ಡಿ ಎಸ್ (520 ಅಂಕ), ಆದರ್ಶ್ ಎಂ (517 ಅಂಕ), 7 ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.

 

4.ಸ್ಪೂರ್ತಿ ಸಾಲ್ಯಾನ್ (520 ಅಂಕ)                5.ದೀಕ್ಷಾ ಡಿ ಎಸ್ (520 ಅಂಕ)                 6.ಆದರ್ಶ್ ಎಂ (517 ಅಂಕ)

 

7.ಅಭಿಷೇಕ್ ಭಟ್ (503 ಅಂಕ)

ಒಟ್ಟು 7 ವಿದ್ಯಾರ್ಥಿಗಳು 500ಕ್ಕಿಂತಲೂ ಅಧಿಕ ಅಂಕ ಗಳಿಸಿದ್ದು, 13 ವಿದ್ಯಾರ್ಥಿಗಳು 450ಕ್ಕಿಂತ ಅಧಿಕ ಅಂಕ ಗಳಿಸಿ ಗಮನಾರ್ಹ ಫಲಿತಾಂಶ ನೀಡಿದ್ದಾರೆ. ವಿದ್ಯಾಲಯದ ದಶಮಾನೋತ್ಸವದ ಸುಸಂದರ್ಭದಲ್ಲಿ ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರು, ಸಂಚಾಲಕರು ಹಾಗೂ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.