Monday, January 20, 2025
ಸಿನಿಮಾಸುದ್ದಿ

ಅಪುಲ್ ಆಳ್ವಾ ಕ್ಯಾಮರಾ ಕಣ್ಣಲ್ಲಿ ಶಾರದೆಯಾಗಿ ಮಿಂಚುತ್ತಿದ್ದಾರೆ ಮಂಗಳೂರಿನ ಬೆಡಗಿ ನಟಿ ಚೈತ್ರಾ ರೈ ; ಕರಾವಳಿಯಲ್ಲಿ ಆಳ್ವಾ – ರೈ ಫೋಟೋ ಕಮಾಲ್..! – ಕಹಳೆ ನ್ಯೂಸ್

ಮಂಗಳೂರಿನ ಪ್ರತಿಭಾನ್ಮಿತ ಛಾಯಾಗ್ರಾಹಕ ಅಪುಲ್ ಆಳ್ವಾ ಇರಾ ಅವರ ಕ್ಯಾಮರಾ ಕಣ್ಣು ಇಗ ಸಕತ್ ಸುದ್ದಿ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರು ತೆಗೆದ ನವರಾತ್ರಿಯ ಫೋಟೋಸ್ ಟ್ರೆಂಡ್ ಆಗಿದೆ.

ಎಸ್, ಹೌದು ಈ ಫೋಟೋಸ್ ಯಾರದ್ದು ಗೊತ್ತಾ..!? ‘ರಾಧಾ ಕಲ್ಯಾಣ’ ಧಾರಾವಾಹಿ ಪ್ರಸ್ತುತ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಆದರೆ ಇದಕ್ಕಿಂತ ಮೊದಲು ಇದೇ ಶೀರ್ಷಿಕೆಯಲ್ಲಿಯೇ ಇನ್ನೊಂದು ಬರುತ್ತಿತ್ತು. ಸಂಜೆ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ನೋಡಲು ಚಿಕ್ಕಮಕ್ಕಳಿಂದ ವೃದ್ಧರೂ ಕೂಡ ಇದನ್ನು ನೋಡಲು ಟಿವಿ ಮುಂದೆ ಕುಳಿತಿದ್ದರು. ಅಂದು ಒಂದು ಟ್ರೆಂಡ್ ಸೆಟ್ ಮಾಡಿತ್ತು ‘ರಾಧಾ ಕಲ್ಯಾಣ’. ಧಾರಾವಾಹಿ ಮುಗಿದರೂ ಹತ್ತಾರು ವರ್ಷಗಳು ಕಳೆದರೂ ರಾಧಿಕಾ-ವಿಶು, ವಿಶಾಖಾ ಪಾತ್ರಗಳನ್ನು ಜನರು ಮರೆತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶಾಖಾ ಪಾತ್ರಕ್ಕೆ ಜೀವ ತುಂಬಿದವರು ನಟಿ ಚೈತ್ರಾ ರೈ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಅನ್ನು ಹೊಂದಿದ್ದು, ಸದ್ಯ ಈಗ ಶಾರದೆ ರೂಪದಲ್ಲಿ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಡಿನಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನಲೆಯಲ್ಲಿಯೇ ಕಿರುತೆರೆ – ಬೆಳ್ಳಿತೆರೆ ನಟಿಮಣಿಯರು ನವದುರ್ಗೆಯರ ರೂಪದಲ್ಲಿ ತಮ್ಮ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

ಆದರೆ, ಚೈತ್ರಾ ಅವರ ಶಾರದೆಯ ಫೋಟೋ ಮಾತ್ರ ಯುವಕ ಯುವತಿಯ ಸ್ಟೇಟಸ್ ಸೇರಿದ್ದು, ಕರಾವಳಿಯಲ್ಲಿ ಟ್ರೆಂಡ್ ಸೆಟ್ ಮಾಡಿದೆ.

ಈ ಫೋಟೋಗಳ ಹಿಂದಿನ ಚಾಲಕ ಶಕ್ತಿ ಅಪುಲ್ ಆಳ್ವಾಗೆ ಕರಾವಳಿಗರು ಧನ್ಯವಾದ ಹೇಳುತ್ತಿದ್ದಾರೆ.

Photos ; 

 

apul alva :