ಬೆಂಗಳೂರು: ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಇಂಗ್ಲೀಷ್ ಪ್ರಶ್ನೆಪತ್ರಿಕೆಯಲ್ಲಿ ಸುಮಾರು 30 ತಪ್ಪು ಕಂಡು ಬಂದಿವೆ. ಒಂದೇ ಅರ್ಥ ಬರುವ ರೀತಿಯಲ್ಲಿ 2 -3 ಬಾರಿ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ವಿಷಯ ತಜ್ಞರು ಹೇಳಿದ್ದಾರೆ.
ಸಾಕಷ್ಟು ಪ್ರಶ್ನೆಗಳಲ್ಲಿ ವ್ಯಾಕರಣ ದೋಷಗಳಿದ್ದು, ಅಸಂಬಂದ್ಧವಾಗಿ ಪ್ರಶ್ನೆಗಳನ್ನು ರೂಪಿಸಲಾಗಿದೆ. ಪ್ರಶ್ನೆ ಪತ್ರಿಕೆಯಲ್ಲೇ ತಪ್ಪಾದರೆ ವಿದ್ಯಾರ್ಥಿಗಳಿಂದ ಸರಿ ಉತ್ತರ ನಿರೀಕ್ಷಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಲಾಗಿದ್ದು, ಪ್ರಶ್ನೆಗಳು ಸರಿಯಾಗಿಲ್ಲದ ಕಾರಣ ಕೃಪಾಂಕವನ್ನು ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ಮಾದರಿ ಉತ್ತರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಮಾರ್ಚ್ 20 ರೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ಇನ್ನು ಭೌತಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ 3 ಪ್ರಶ್ನೆಗಳು ಕಠಿಣವಾಗಿದ್ದ ಕಾರಣ ಕೃಪಾಂಕ ನೀಡಲು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ವಿಷಯ ತಜ್ಞರಿಂದ ಸಲಹೆ ಪಡೆದು, ಸ್ವತಂತ್ರ ತಜ್ಞರ ಸಮಿತಿ ರಚಿಸಿ, ಕೃಪಾಂಕ ನೀಡುವ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲಿದೆ.