Recent Posts

Monday, January 20, 2025
ಹೆಚ್ಚಿನ ಸುದ್ದಿ

ಪ್ರಧಾನಿಯವರಿಂದ ಮೈಸೂರು ವಿವಿ ಘಟಿಕೋತ್ಸವ ಭಾಷಣ-ಕಹಳೆ ನ್ಯೂಸ್

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಐತಿಹಾಸಿಕ 100ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘಟಿಕೋತ್ಸವ ಭಾಷಣ ಮಾಡುತ್ತಿದ್ದು, ಅದರ ನೇರ ಪ್ರಸಾರ ವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ಕಿಸಬಹುದು. ಪ್ರಧಾನಿ ನರೇಂದ್ರಮೋದಿಯವರ ಭಾಷಣದ ಸಾರ ಇಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲರಿಗೂ ಮೈಸೂರು ದಸರಾ, ನಾಡಹಬ್ಬದ ಹೃದಯಪೂರ್ವಕ ಶುಭಾಶಯಗಳು. ಕೆಲವೊಂದು ಛಾಯಾಚಿತ್ರಗಳನ್ನು ಗಮನಿಸುತ್ತಿದ್ದೆ. ಕೋವಿಡ್ 19ಗೆ ಸಂಬಂಧಿಸಿದ ನಿರ್ಬಂಧಗಳಿರಬಹುದು. ಆದರೆ, ಸಂಭ್ರಮದ ಉತ್ಸಾಹಕ್ಕೇನೂ ಕೊರತೆ ಇಲ್ಲ. ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ತೊಂದರೆಯಾಗಿದೆ. ಸಂತ್ರಸ್ತರ ಬಗ್ಗೆ ನನ್ನ ಸಹಾನುಭೂತಿ ಇದೆ. ಕೇಂದ್ರ ಹಾಗೂ ರಾಜ್ಯಗಳು ಪರಿಹಾರ ಕಾರ್ಯದ ಪ್ರಯತ್ನದಲ್ಲಿವೆ. ಮುಖತಃ ಭೇಟಿಯಾಗುವ ನಿರೀಕ್ಷೆ ಆಸೆ ಇತ್ತು. ಕರೊನಾ ಕಾರಣ ಅದು ನೆರವೇರಿಲ್ಲ. ಆದಾಗ್ಯೂ, ನಾವು ವರ್ಚುವಲ್ ರೂಪದಲ್ಲಿ ಎಲ್ಲರೂ ಜತೆಯಾಗುತ್ತಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡದಲ್ಲಿ ಮೋದಿ ಮಾತು

ಘಟಿಕೋತ್ಸವದ ಈ ಸ್ಮರಣೀಯ ಸಮಾರಂಭದ ಸಂದರ್ಭದಲ್ಲಿ ನಿಮಗೆಲ್ಲರಿಗೂ ಅಭಿನಂದನೆಗಳು. ಈ ಸಂದರ್ಭದಲ್ಲಿ ಪದವಿ ಪ್ರಮಾಣ ಪತ್ರ ಪಡೆಯುತ್ತಿರುವ ಎಲ್ಲರಿಗೂ ಶುಭಾಶಯಗಳು. ಬೋಧಕ ಸಿಬ್ಬಂದಿಗೂ ಶುಭಾಶಯಗಳನ್ನು ಕೋರುತ್ತೇನೆ. ಮೈಸೂರು ವಿವಿ ಪ್ರಾಚೀನ ಭಾರತದ ಸಮೃದ್ಧ ಶಿಕ್ಷಣ ವ್ಯವಸ್ಥೆಯ ಹಾಗೂ ಭವಿಷ್ಯ ಶಿಕ್ಷಣಕ್ಕೆ ಮಾರ್ಗದರ್ಶನ ಮಾಡಬಲ್ಲ ಒಂದು ಪ್ರಮುಖ ಕೇಂದ್ರವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮತ್ತು ಸಂಕಲ್ಪಗಳನ್ನು ಸಾಕಾರಗೊಳಿಸಿರುವ ವಿಶ್ವವಿದ್ಯಾಲಯವಿದು. ಇಂದಿನ ಈ ದಿನಕ್ಕೆ ಸರಿಯಾಗಿ 102 ವರ್ಷ ಹಿಂದೆ ಇದೇ ದಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿಯ ಮೊದಲ ಘಟಿಕೋತ್ಸವ ಭಾಷಣ ಮಾಡಿದ್ದರು. ಅಂದಿನಿಂದ ಇಂದಿನ ತನಕ ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡಿದ ಅನೇಕ ರತ್ನಗಳು ಪದವಿ ದೀಕ್ಷೆ ಪಡೆದ ಸಂದರ್ಭಕ್ಕೆ ಈ ರತ್ನಗರ್ಭ ಪ್ರಾಂಗಣವು ಸಾಕ್ಷಿಯಾಗಿದೆ.